ಕಾಂಗ್ರೆಸ್‌ನಲ್ಲಿ ದಲಿತ ಎಡಗೈ, ಬಲಗೈ ಪಾಲಿಟಿಕ್ಸ್; ಸಿದ್ದರಾಮಯ್ಯಗೆ ನಾಯಕರಿಂದ ದೂರು

ಕಾಂಗ್ರೆಸ್‌ನಲ್ಲಿ 'ದಲಿತ' ಪಾಲಿಟಿಕ್ಸ್ ಜೋರಾಗಿದೆ. ದಲಿತ ಬಲಗೈ ನಾಯಕರಿಗೆ ಕಾಂಗ್ರೆಸ್ ಮಣೆ ಹಾಕುತ್ತಿದೆ. ದಲಿತ ಎಡಗೈ ನಾಯಕರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್‌ಗೆ ಪಕ್ಷದಲ್ಲಿ ದೊಡ್ಡ ಹುದ್ದೆ ನೀಡಲಾಗಿದೆ. 

First Published Jan 24, 2021, 10:54 AM IST | Last Updated Jan 24, 2021, 10:54 AM IST

ಬೆಂಗಳೂರು (ಜ. 24): ಕಾಂಗ್ರೆಸ್‌ನಲ್ಲಿ 'ದಲಿತ' ಪಾಲಿಟಿಕ್ಸ್ ಜೋರಾಗಿದೆ. ದಲಿತ ಬಲಗೈ ನಾಯಕರಿಗೆ ಕಾಂಗ್ರೆಸ್ ಮಣೆ ಹಾಕುತ್ತಿದೆ. ದಲಿತ ಎಡಗೈ ನಾಯಕರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್‌ಗೆ ಪಕ್ಷದಲ್ಲಿ ದೊಡ್ಡ ಹುದ್ದೆ ನೀಡಲಾಗಿದೆ. ಬಲಗೈ ನಾಯಕ ಧ್ರುವ ನಾರಾಯಣ್‌ಗೆ ಕಾರ್ಯಾಧ್ಯಕ್ಷ ಸ್ಥಾನ ನೀಡಲಾಗಿದೆ. ಈ ಬಗ್ಗೆ ಹೈಕಮಾಂಡ್‌ಗೆ ದೂರು ನೀಡಲು ಎಡಗೈ ನಾಯಕರು ತೀರ್ಮಾನಿಸಿದ್ದಾರೆ. 

ಸಿದ್ದರಾಮಯ್ಯ ನಿವಾಸದ ಎದುರು ಗಲಾಟೆ: ರಸ್ತೆಯಲ್ಲಿ ಬಿದ್ದು ಒದ್ದಾಡಿದ ಮಹಿಳೆ

ಬಿಜೆಪಿ ಪಾಲಾಗುತ್ತಿರುವ ಮತಗಳನ್ನು ಕಾಂಗ್ರೆಸ್ ಮರಳಿ ಪಡೆಯಬೇಕು. ಆದ್ದರಿಂದ ದಲಿತ ಎಡಗೈ ನಾಯಕರಿಗೆ ಕಾರ್ಯಾಧ್ಯಕ್ಷ ಸ್ಥಾನ ನೀಡಬೇಕು ಎಂದು ಆರ್‌ ಬಿ ತಿಮ್ಮಾಪುರ್, ಹನುಮಂತಯ್ಯ, ಎಚ್‌. ಆಂಜನೇಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ ಬಳಿ ಚರ್ಚಿಸಲಿದ್ದಾರೆ.