Asianet Suvarna News Asianet Suvarna News

ಕಾಂಗ್ರೆಸ್‌ಗೆ ಬಂಡೆ ಬಿಗ್ ಬಾಸ್: ಕುಮಾರಸ್ವಾಮಿ ಬೆಚ್ಚಿ ಬಿದ್ದರೇಕೆ..?

ರಣಬೇಟೆಗಾರನಿಗೆ ಕೆಪಿಸಿಸಿ ಪಟ್ಟ.. ಮುಗೀತಾ ಸಿದ್ದು ದರ್ಬಾರ್..? ಕಾಂಗ್ರೆಸ್'ಗೆ ಬಂಡೆ ಬಿಗ್ ಬಾಸ್.. ಬೆಚ್ಚಿ ಬಿದ್ದದ್ದೇಕೆ ಎಚ್'ಡಿಕೆ..? 2020ಕ್ಕೆ ಕೆಪಿಸಿಸಿ.. 2023ಕ್ಕೆ ಸಿಎಂ.. ಏನಿದು ಪಟ್ಟದ ಗುಟ್ಟು..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಬಾ... ಬಾ... ಬಾ... ನಾನ್ ರೆಡಿ..!

First Published Mar 12, 2020, 9:26 PM IST | Last Updated Mar 12, 2020, 9:26 PM IST

ಬೆಂಗಳೂರು, [ಮಾ.12]: ಬಾ...ಬಾ.. ಬಾ ನಾನ್ ರೆಡಿ... ದಂಡನಾಯಕನ ಪಟ್ಟ ಸಿಕ್ಕಿದ್ದೇ ತಡ... ಕನಕಪುರ ಬಂಡೆ ಡಿಕೆ ಶಿವಕುಮಾರ್ ಅಖಾಡಕ್ಕಿಳಿದಿದ್ದಾರೆ. ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದ ಡಿಕೆಗೆ ಕೊನೆಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ದಕ್ಕಿದೆ. 

ಡಜನ್ ಸವಾಲು ಗೆದ್ದರಷ್ಟೇ ನೂತನ ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ಕಾಂಗ್ರೆಸ್‌ನಲ್ಲಿ ಉಳಿಗಾಲ

ಇನ್ನೇನಿದ್ರೂ ರಾಜ್ಯ ಕಾಂಗ್ರೆಸ್'ನಲ್ಲಿ ಕನಕಪುರ ಬಂಡೆಯದ್ದೇ ದರ್ಬಾರ್. ಹಾಗಾದ್ರೆ ಸಿದ್ದರಾಮಯ್ಯನವರ ಖದರ್ ಕಮ್ಮಿಯಾಗುತ್ತಾ..? ಮೊದಲ ಸಿಂಹಾಸನ ಗೆದ್ದ ಡಿಕೆ ಕಣ್ಣಿಟ್ಟಿರುವ 2ನೇ ಸಿಂಹಾಸನ ಯಾವುದು..? ರಣಬೇಟೆಗಾರನ ಪಟ್ಟಾಭಿಷೇಕದ ಹಿಂದಿನ ಇಂಟ್ರೆಸ್ಟಿಂಗ್ ಸ್ಟೋರಿಯೇ ಇವತ್ತಿನ ಈ ಸೂಪರ್ ಸ್ಪೆಷಲ್ ಎಪಿಸೋಡ್.