ಇಟಲಿ ಕಾಂಗ್ರೆಸ್‌ನ ಒಂದು ನಾಯಿಯೂ ಭಾರತದ ಪರವಿಲ್ಲ, ಖರ್ಗೆಗೆ ಸಿಟಿ ರವಿ ಟಾಂಗ್!

ಕಾಂಗ್ರೆಸ್‌ನಲ್ಲಿ 3ನೇ ಸಮೀಕ್ಷೆ ರೆಡಿ, ಶಾ ಮಾದರಿ ಟಿಕೆಟ್ ಹಂಚಿಕೆ, ವಿಧಾನಸಭೆಯಲ್ಲಿ ಗೆಟ್ ಲಾಸ್ಟ್ ಜಟಾಪಟಿ, ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಮಣಿಯಿತಾ ಸರ್ಕಾರ, ಚೀನಾದಲ್ಲಿ ಕೊರೋನಾ ರಣಕೇಕೆ ಸೇರಿದಂತೆ ಇಂದಿನ ಇಡಿ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

Share this Video
  • FB
  • Linkdin
  • Whatsapp

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ ನಾಯಿ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗುತ್ತಿದೆ. ಕಾಂಗ್ರೆಸ್ ನಾಯಕರು ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಬಿಜೆಪಿ ನಾಯಕರ ಮನೆಯ ಒಂದು ನಾಯಿಯೂ ಪ್ರಾಣ ಕೊಟ್ಟಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ರಾಜಸ್ಥಾನದಲ್ಲಿ ಮಾಡಿದ ಭಾಷಣದಲ್ಲಿ ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ ಕಾರ್ಯದರ್ಶಿ ಸಿಟಿ ರವಿ, ಈಗಿರುವುದು ನೆಹರೂ ಕಾಂಗ್ರೆಸ್ ಅಲ್ಲ, ಇಟಲಿ ಕಾಂಗ್ರೆಸ್. ಈ ಕಾಂಗ್ರೆಸ್‌ನ ಒಂದು ನಾಯಿಯೂ ಭಾರತದ ಪರ ಇಲ್ಲ. ಭಾರತದ ಪರ ಬೊಗಳುವುದು ಇಲ್ಲ, ಬಾಲ ಅಲ್ಲಾಡಿಸುವುದು ಇಲ್ಲ ಎಂದಿದ್ದಾರೆ. ನಾಯಿ ಹೇಳಿಕೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಜಟಾಪಟಿಗೆ ಕಾರಣವಾಗಿದೆ. 

Related Video