Asianet Suvarna News Asianet Suvarna News

KRS ಬಾಗಿಲಿಗೆ ಸುಮಲತಾರನ್ನು ಅಡ್ಡಡ್ಡ ಮಲಗಿಸ್ಬೇಕು: ಏನಿದು ಎಚ್‌ಡಿಕೆ ಮಾತಿನ ಅರ್ಥ?

Jul 5, 2021, 4:19 PM IST

ಮಂಡ್ಯ, (ಜುಲೈ.05): ಕೆಆರ್‌ಎಸ್ ಬಿರುಕು ಬಿಟ್ಟಿದೆ ಎಂದು ಆರೋಪಿಸಿದ್ದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್‌ಡಿ ವಾಗ್ದಾಳಿ ನಡೆಸಿದ್ದಾರೆ.

ತಮ್ಮನ್ನು ಅಡ್ಡಲಾಗಿ ಮಲಗಿಸಬೇಕೆಂದ ಎಚ್‌ಡಿಕೆಗೆ ಸುಮಲತಾ ಸಂಸ್ಕಾರದ ಪಾಠ

ಮಂಡ್ಯಕ್ಕೆ ಇಂಥ ಸಂಸದರು ಈ ಹಿಂದೆ ಸಿಕ್ಕಿಲ್ಲ, ಮುಂದೆ ಸಿಗುವುದೂ ಇಲ್ಲ. ಕೆಆರ್​​ಎಸ್ ​​ಅನ್ನು ಸಂಸದೆ ಸುಮಲತಾ ಅಂಬರೀಷ್​ ಅವರೇ ರಕ್ಷಣೆ ಮಾಡುತ್ತಾರಂತೆ. ಕೆಆರ್​ಎಸ್​ ರಕ್ಷಣೆಗಾಗಿ ಅವರನ್ನೇ ಜಲಾಶಯದ ಗೇಟ್ ಬಳಿ ಅಡ್ಡಡ್ಡ ಮಲಗಿಸಿದರೆ ಎಲ್ಲವೂ ಸರಿಯಾಗಲಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಕಿಡಿಕಾರಿದ ಬೆನ್ನಲ್ಲೇ ಸುಮಲತಾ ಕೂಡ ಟಾಂಗ್​ ಕೊಟ್ಟಿದ್ದಾರೆ.