ಸಂಪುಟ ಸರ್ಕಸ್‌ಗೂ ಮುನ್ನ ಸಿ ಪಿ ಯೋಗೇಶ್ವರ್‌ಗೆ ಬಂಪರ್ ಆಫರ್ ಕೊಟ್ಟ ಸಿಎಂ..!
ಸಿಪಿ ಯೋಗೇಶ್ವರ್‌ಗೆ ಮಂತ್ರಿಯಾಗುವ ಯೋಗಾಯೋಗ ಕೂಡಿ ಬಂದಿದೆ. 'ನೂರಕ್ಕೆ ನೂರರಷ್ಟು ಯೋಗೇಶ್ವರ್‌ರನ್ನು ಮಂತ್ರಿ ಮಾಡುತ್ತೇವೆ' ಎಂದು ಸಿಎಂ ಬಿಎಸ್‌ವೈ ಹೇಳಿದ್ದಾರೆ.
ಬೆಂಗಳೂರು (ಡಿ. 01): ಸಿಪಿ ಯೋಗೇಶ್ವರ್‌ಗೆ ಮಂತ್ರಿಯಾಗುವ ಯೋಗಾಯೋಗ ಕೂಡಿ ಬಂದಿದೆ. ನೂರಕ್ಕೆ ನೂರರಷ್ಟು ಯೋಗೇಶ್ವರ್‌ರನ್ನು ಮಂತ್ರಿ ಮಾಡುತ್ತೇವೆ' ಎಂದು ಸಿಎಂ ಬಿಎಸ್‌ವೈ ಹೇಳಿದ್ದಾರೆ.
ಸಚಿವ ಸ್ಥಾನದಿಂದ ವಿಶ್ವನಾಥ್ ಅನರ್ಹ ; ದೇವರು ಕೊಟ್ಟ ಶಿಕ್ಷೆ ಎಂದ ಸಾರಾ ಮಹೇಶ್ ಟಾಂಗ್!
ಸೋತವರನ್ನು ಮಂತ್ರಿ ಮಾಡಲೇಬಾರದು ಎಂದು ಶಾಸಕರು ಪಟ್ಟು ಹಿಡಿದಿದ್ದರು. ಆದರೆ ಸಿಎಂ ಅವರ ಒತ್ತಡಕ್ಕೆ ಮಣಿದಿಲ್ಲ. ಯೋಗೇಶ್ವರ್ ವಿರೋಧಿ ಪಾಳಯಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಒಂದು ಕಡೆ ಸಂಪುಟ ಸರ್ಕಸ್ ವಿಳಂಬವಾಗುತ್ತಿದೆ. ಇನ್ನೊಂದು ಕಡೆ ಸಿಎಂ ಹೊಸ ಬಾಂಬ್ ಹಾಕಿದ್ದಾರೆ. ಏನಿದು ಪಾಲಿಟಿಕ್ಸ್?