ಬಿಜೆಪಿ ಜನಾಶೀರ್ವಾದ ಯಾತ್ರೆಯಲ್ಲಿ ಜನ ಜಾತ್ರೆ: ಇವರಿಗೆ ಕೊರೋನಾ ರೂಲ್ಸ್ ಅನ್ವಯಿಸಲ್ವಾ?

ಹೇಳೋದು ಆಚಾರ, ತಿನ್ನೋದು ಬದನೆಕಾಯಿ ಎನ್ನುವಂತೆ  ಕೊರೋನಾ ಸೋಂಕು ತಡೆಗೆ ಸಾರ್ವಜನಿಕರಿಗೆ ಭಾಷಣ ಮಾಡ್ತಾರೆ. ಆದ್ರೆ, ಅಧಿಕಾರದಲ್ಲಿದ್ದವರೇ ಕೊರೋನಾ ನಿಯಮಗಳನ್ನ ಗಾಳಿಗೆ ರಾಜಕೀಯ ಚಟುವಟಿಕೆಗಳನ್ನ ಮುಂದುವರೆಸಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು, (ಆ.22): ಹೇಳೋದು ಆಚಾರ, ತಿನ್ನೋದು ಬದನೆಕಾಯಿ ಎನ್ನುವಂತೆ ಕೊರೋನಾ ಸೋಂಕು ತಡೆಗೆ ಸಾರ್ವಜನಿಕರಿಗೆ ನಾನಾ ನಿಯಮಗಳನ್ನ ಹಾಕಿದ್ದಾರೆ. ಆದ್ರೆ, ಅಧಿಕಾರದಲ್ಲಿದ್ದವರೇ ಕೊರೋನಾ ನಿಯಮಗಳನ್ನ ಗಾಳಿಗೆ ರಾಜಕೀಯ ಚಟುವಟಿಕೆಗಳನ್ನ ಮುಂದುವರೆಸಿದ್ದಾರೆ.

ಕೋವಿಡ್ ನಿಯಮ ಉಲ್ಲಂಘಿಸಿದ ಸಚಿವ ಸೋಮಶೇಖರ್ : ಜನಪ್ರತಿನಿಧಿಗಳಿಗೊಂದು ನ್ಯಾಯವೇ..?

ಹೌದು...ಕೇಂದ್ರ ಸರ್ಕಾರದ ನೂತನ ಸಚಿವರ ನೇತೃತ್ವದಲ್ಲಿ ನಡೆಯುತ್ತಿರುವ ಬಿಜೆಪಿ ಜನಾಶೀರ್ವಾದ ಯಾತ್ರೆಯಲ್ಲಿ ಜನಜಾತ್ರೆ ಕಂಡುಬರುತ್ತಿದ್ದು, ಯಾವುದೇ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುತ್ತಿಲ್ಲ. ಕೇಂದ್ರ ಸಚಿವ ನಾರಾಯಣಸ್ವಾಮಿ ಎದುರೇ ಜನದಟ್ಟಣೆ ಇದ್ದರೂ ಸಹ ಅವರಿಂದ ಸನ್ಮಾನ ಮಾಡಿಕೊಂಡು ಫೋಸೋ ಕೊಡುತ್ತಿದ್ದಾರೆ. ಇನ್ನು ಇದೇ ವೇಳೆ ಪಟಾಕಿ ಸಿಡಿಸುವ ವೇಳೆ ಬೈಕ್‌ಗೆ ಬೆಂಕಿ ತಗುಲಿದೆ. ಆದ್ರೆ, ಜನರ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದೆ.

Related Video