ಜನಪ್ರತಿನಿಧಿಗಳಿಂದಲೇ ಪದೇಪದೇ ಕೋವಿಡ್ ಮಾರ್ಗಸೂಚಿ ಉಲ್ಲಂಘನೆಯಾಗುತ್ತಿದೆ ಅನೇಕ ರಾಜಕೀಯ ಮುಖಂಡರುಗಳೂ ಕೊವಿಡ್ ನಿಯಮಗಳನ್ನು ಮುರಿಯುತ್ತಿರುವುದು ಬೆಳಕಿಗೆ ಸಹಕಾರ ಸಚಿವ ಸೋಮಶೇಖರ್ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಭೇಟಿ ನೀಡಿದ್ದು ಕೋವಿಡ್ ರೂಲ್ಸ್ ಬ್ರೇಕ್
ಚಾಮರಾಜನಗರ (ಆ.21): ಜನಪ್ರತಿನಿಧಿಗಳಿಂದಲೇ ಪದೇಪದೇ ಕೋವಿಡ್ ಮಾರ್ಗಸೂಚಿ ಉಲ್ಲಂಘನೆಯಾಗುತ್ತಿದೆ. ಅನೇಕ ರಾಜಕೀಯ ಮುಖಂಡರುಗಳೂ ಕೊವಿಡ್ ನಿಯಮಗಳನ್ನು ಮುರಿಯುತ್ತಿರುವುದು ಬೆಳಕಿಗೆ ಬಂದಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ವೀಕೆಂಡ್ ನಲ್ಲಿ ದೇವಸ್ಥಾನ ಗಳಿಗೆ ಪ್ರವೇಶ ನಿಷಿದ್ಧವಾದರು ಸಹಕಾರ ಸಚಿವ ಸೋಮಶೇಖರ್ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಭೇಟಿ ನೀಡಿದ್ದು ಕೋವಿಡ್ ರೂಲ್ಸ್ ಬ್ರೇಕ್ ಮಾಡಿದ್ದಾರೆ.
2 ಡೋಸ್ ಲಸಿಕೆ ಪಡೆದ 87 ಸಾವಿರ ಜನರಿಗೆ ಕೊರೋನಾ
ಚಾಮರಾಜನಗರ ಉಸ್ತುವಾರಿ ಸಚಿವರಾದ ಸೋಮಶೇಖರ್ ಇಂದು ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಿದ್ದು ಜನಾಕ್ರೋಶಕ್ಕೆ ಕಾರಣವಾಗಿದೆ. ಇವರ ನಡೆಯು ಜನಪ್ರತಿನಿಧಿಗಳಿಗೊಂದು ಕಾನೂನು, ಜನಸಾಮಾನ್ಯರಿಗೊಂದು ಕಾನೂನು ಎನ್ನುವಂತಾಗಿದೆ.
ಇಂದು ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿರುವ ಸಚಿವರು ಜಿಲ್ಲಾ ಪ್ರವಾಸ ಆರಂಭಿಸುವ ಮೊದಲೇ ಗೋಪಲಾಸ್ವಾಮಿ ಬೆಟ್ಟಕ್ಕೆ ತೆರಳಿದ್ದರು. ಜಿಲ್ಲೆಯ ಕೋವಿಡ್ ನಿರ್ವಹಣೆ ಉಸ್ತುವಾರಿ ಹೊತ್ತಿರುವ ಸಚಿವರೇ ನಿಯಮ ಮುರಿದಿದ್ದಾರೆ.
