Asianet Suvarna News Asianet Suvarna News

ಕುಮಾರಸ್ವಾಮಿಯನ್ನು ಹಾವಾಡಿಗರಿಗೆ ಹೋಲಿಸಿದ ಸಚಿವ ಕೆ.ಎನ್. ರಾಜಣ್ಣ: ಜೇಬಲ್ಲಿರೋದನ್ನ ಆಚೆ ಬಿಡಿ

ಮಾಜಿ ಸಿಎಂ ಕುಮಾರಸ್ವಾಮಿ ಸುಳ್ಳು ಆರೋಪ ಮಾಡ್ತಿದ್ದಾರೆ. ಹಾವಾಡಿಗರು ಹಾವು ಬಿಡ್ತಿವಿ ಅಂತಾ ಹೇಳ್ತಾರಲ್ಲಾ ಅಂತಹ ಕೆಲಸವಾಗಿದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಟೀಕೆ ಮಾಡಿದರು.

ಹಾಸನ (ಆ.05): ರಾಜ್ಯದ ಸರ್ಕಾರದ ಮೇಲಿರೋ ವರ್ಗಾವಣೆ ದಂಧೆ ಆರೋಪಗಳೆಲ್ಲಾ ಸುಳ್ಳು. ಅದೇನಾದ್ರೂ ಇದ್ದರೆ ನಿಖರವಾಗಿ ಇಂತಹ ಅಂಶದಲ್ಲಿ ಆಗಿದೆ ಅಂತಾ ಹೇಳಲಿ. ಮಾಜಿ ಸಿಎಂ ಕುಮಾರಸ್ವಾಮಿ ಅವರು, ಸಾಕ್ಷ್ಯವನ್ನು ಇಲ್ಲಿ ಇಟ್ಕೊಂಡಿದ್ದೀನಿ, ನಾಳೆ ತೋರಿಸ್ತೀನಿ, ನಾಳಿದ್ದು ಕೊಡ್ತೀನಿ ಅನ್ನೋದು, ಹಾವಾಡಿಗರು ಹಾವು ಬಿಡ್ತಿವಿ ಅಂತಾ ಹೇಳ್ತಾರಲ್ಲಾ ಆ ತರಹದ ಕೆಲಸವಾಗಿದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಟೀಕೆ ಮಾಡಿದರು.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರದಲ್ಲಿ ವರ್ಗಾವಣೆ ದಂಧೆ ಆರೋಪಗಳೆಲ್ಲಾ ಸುಳ್ಳು. ಅದೇನಾದ್ರೂ ಇದ್ದರೆ ನಿಖರವಾಗಿ ಇಂತಹ ಅಂಶದಲ್ಲಿ ಆಗಿದೆ ಅಂತಾ ಹೇಳಲಿ. ಅದೇನೋ ಹೇಳ್ತಾ ಇದ್ರಲ್ಲ ಜೇಬಿನಲ್ಲಿ ತೋರಿಸಿಕೊಂಡು ಇಲ್ಲೈತೆ .. ಅಲ್ಲೈತೆ.. ತೋರಿಸ್ತಾ ಇದ್ರಲ್ಲ. ಏನಿದೆ ಅದನ್ನು ಹೊರ ಹಾಕೋದಕ್ಕೆ ಹೇಳಿ, ಹೊರ ಹಾಕಿದ ಮೇಲೆ ಯಾರು ತಪ್ಪಿತಸ್ಥರಿರ್ತಾರೆ ಗೊತ್ತಾಗುತ್ತದೆ. ಸುಮ್ಮನೆ ಸುಳ್ಳು ಆಪಾದನೆ ಮಾಡುವಂತಹದ್ದು ಯಾರಿಗೂ ಭೂಷಣ ಅಲ್ಲ ಎಂದು ಹೇಳಿದರು.

ಬಿಡಿಎನಲ್ಲಿ‌ ಹಣ ವಸೂಲಿ ಮಾಡೋದಕ್ಕೆ ಅಧಿಕಾರಿಗಳನ್ನ ನೇಮಕ‌ ಮಾಡಿದ್ದಾರೆ ಎಂಬ ವಿಚಾರವೂ ಸುಳ್ಳಾಗಿದೆ. ನಮ್ಮ ಸರ್ಕಾರ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ. ಏನೇ ಆಪಾದನೆ ಮಾಡಿದ್ರೂ ಕೂಡಾ ಅದಕ್ಕೆ ಏನಾದ್ರೂ ಆಧಾರ ಇರಬೇಕು. ಆಧಾರ ಇಟ್ಟು ಹೇಳಿದ್ರೆ ಒಪ್ಪುತ್ತೇವೆ. ಪದೇ ಪದೇ ಇಲ್ಲೆಲ್ಲಾ ಇಟ್ಕೊಂಡಿದ್ದೀನಿ, ತೋರಿಸ್ತೀನಿ.. ನಾಳೆ ಕೊಡ್ತೀನಿ, ನಾಳಿದ್ದು ಕೊಡ್ತೀನಿ ಅಂತಾರೆ. ಇದು ಹಾವಾಡಿಗರು ಹಾವು ಬಿಡ್ತಿವಿ ಅಂತಾ ಹೇಳ್ತಾರಲ್ಲಾ ಆ ತರಹದ ಕೆಲಸವಾಗಿದೆ. ಅದೆಲ್ಲಾ ಮಾಡಬಾರದು, ಈಗಲೂ ಅರ್ಜೆಂಟಾಗಿ ತೋರಿಸೋದಕ್ಕೆ ಹೇಳಿ. ಇಷ್ಟು ದಿನ ಯಾಕೆ ಕಾಯಬೇಕು, ಆಪಾದನೆ ವೈಯಕ್ತಿಕವಾಗಿ ಮಾಡ್ತರಲ್ಲಾ. ಅಲ್ಲಿ ಲಂಚ ಹೊಡೆದಿದ್ದಾರೆ, ಇಲ್ಲಿ ಲಂಚ ಹೊಡೆದಿದ್ದಾರೆ ಅಂತಾ ಹೇಳ್ತಾರಲ್ಲಾ. ಜೇಬಿನಲ್ಲಿ ಇದೆ ಅಂತಾ ತೋರಿಸಿದ್ರಲ್ಲಾ, ಅದನ್ನ ಆಚೆ ಬಿಡೋದಕ್ಕೆ ಹೇಳಿ ಅಮೇಲೆ ನೋಡೋಣ ಎಂದರು.

Video Top Stories