ಭುಗಿಲೆದ್ದ ಆಕ್ರೋಶ, ತುರ್ತು ಸುದ್ದಿಗೋಷ್ಠಿ ಕರೆದು ದೇವೇಗೌಡ್ರ ಕ್ಷಮೆಯಾಚಿಸಿದ ರಾಜಣ್ಣ
* ದೇವೇಗೌಡರಿಗೆ ಅವಹೇಳನ ಮಾಡಿದ್ದಾರೆ ಎಂಬ ಆರೋಪ.
* ತುಮಕೂರಿನಲ್ಲಿ ಕೆ.ಎನ್.ರಾಜಣ್ಣ ತುರ್ತು ಸುದ್ದಿಗೋಷ್ಠಿ
* ದೇವೇಗೌಡರಿಗೆ ಕ್ಷಮೆಯಾಚಿಸಿದ ರಾಜಣ್ಣ
ತುಮಕೂರು, (ಜುಲೈ.01): ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಈಗ ಇಬ್ಬರ ಮೇಲೆ ಕೈ ಹಾಕಿಕೊಂಡು ಹೋಗುತ್ತಿದ್ದಾರೆ. ನಾಲ್ವರ ಮೇಲೆ ಹೋಗುವುದು ಹತ್ತಿರದಲ್ಲೇ ಇದೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಹೇಳಿಕೆ ವಿವಾದಕ್ಕೆ ಸಿಲುಕಿದೆ. ಈ ಹೇಳಿಕೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಇನ್ನು ಈ ಬಗ್ಗೆ ರಾಜಣ್ಣ ಅವರು ಪ್ರತಿಕ್ರಿಯಿಸಿ ದೇವೇಗೌಡರ ಮನಸ್ಸಿಗೆ ನೋವಾಗಿದ್ರೆ ವಿಷಾದ ವ್ಯಕ್ತಪಡಿಸುತ್ತೇನೆ. ನನ್ನ ಹೇಳಿಕೆಯಿಂದ ನೋವಾಗಿದರೆ ಕ್ಷಮೆಯಾಚಿಸುತ್ತೇನೆ ಎಂದರು.
ಅವರ ಕುಟುಂಬಸ್ಥರಿಗೆ ಬೇಸರ ಆಗಿದ್ರೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ ನಾನು ಖುದ್ದಾಗಿ ದೇವೇಗೌಡರನ್ನ ಭೇಟಿ ಮಾಡಿ ವಿಚಾರವನ್ನ ಅರ್ಥೈಸುತ್ತೇನೆ. ದೇವೇಗೌಡರಿಗೆ ಈ ಪದ ಬಳಕೆಯಿಂದ ಬೇಸರ ಆಗಿದ್ರೆ ವಿಷಾದ ವ್ಯಕ್ತಪಡಿಸ್ತೇನೆ. ಇದರಲ್ಲಿ ನನ್ನ ವಿರುದ್ದ ರಾಜಕೀಯ ಪಿತೂರಿ ಮಾಡಲಾಗಿದೆ ಎಂದು ಹೇಳಿದರು.
ದೇವೇಗೌಡ್ರ ಬಗ್ಗೆ ಅವಹೇಳನ ಮಾತು, ರಾಜಣ್ಣಗೆ ಖಡಕ್ ಎಚ್ಚರಿಕೆ ಕೊಟ್ಟ ಎಚ್‌ಡಿಕೆ
ಹೇಳಿಕೆ ಬಗ್ಗೆ ಸ್ಪಷ್ಟನೆ ಕೊಟ್ಟ ರಾಜಣ್ಣ
ವಾಸ್ತವ ಸ್ಥಿತಿಯನ್ನ ಎಲ್ಲರಿಗೂ ತಿಳಿಸಲು ಬಂದಿದ್ದೇನೆ. ಕಾರ್ಯಕ್ರಮದಲ್ಲಿ ಮಾತನಾಡ್ತಿದ್ದ ಸಂದರ್ಭದಲ್ಲಿ
2004 ರ ಚುನಾವಣೆಯಲ್ಲಿ ನಾನು ಜೆಡಿಎಸ್ ನಿಂದ ಸ್ಪರ್ಧಿಸಿದ್ದಾಗ ದೊಡ್ಡೇರಿ ಹೋಬಳಿ ಜನರು 5500 ಮತಗಳ ಬಹುಮತ ನೀಡಿದ್ರು. ಇನ್ನೊಂದು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸ್ತೇನೆ ಎಂದು ಹೇಳ್ದೆ. ಈಬಾರಿಯೂ ನನಗೆ ಬಹುಮತ ನೀಡಿ ಗೆಲ್ಲಿಸಬೇಕೆಂದು ಹೇಳ್ದೆ.
ಈ ವೇಳೆ ಮುಂದೆ ಕುಳಿತಿದ್ದ ಒಬ್ಬರು,ಬಿಡಿ ಸ್ವಾಮಿ ದೇವೇಗೌಡರು ಈಗಲೂ ಚುನಾವಣೆ ಮಾಡ್ತಾರೆ ಎಂದರು. ಅದಕ್ಕೆ ನಾನು ಅವರ ಇಬ್ಬರ ಮೇಲೆ ಕೈ ಹಾಕಿ ಓಡಾಡ್ತಾರೆ,ಬಿಡಿ ಅವರ ಬಗ್ಗೆ ಯಾಕೆ ಅಂದೆ. ನನ್ನ ವಿರುದ್ದ ಪಿತೂರಿ ಮಾಡಲಾಗಿದೆ. ಮುಂದೆ ಹಿಂದೆ ಮಾತಾಡಿದ್ದು,ಬಿಟ್ಟು ಕೇವಲ ಒಂದು ನಿಮಿಷದ ವಿಡಿಯೋ ಈ ಅರ್ಥ ಕಲ್ಪಸಿದೆ. ದೇವೇಗೌಡರು ರಾಷ್ಟ್ರದ ಪ್ರಧಾನಿಯಾಗಿದ್ದವರು,ವಯಸ್ಸಲ್ಲಿ ಹಿರಿಯರು. ಅವರ ಸೋಲಿನ ಕುರಿತಾಗಿ ನಮಗೆ ಬೇಸರ ಇದೆ ಎಂದು ಸ್ಪಷ್ಟನೆ ನೀಡಿದರು.
ಈ ರೀತಿಯ ತೇಜೋವಧೆ ಮಾಡಬಾರದು. ದೇವೇಗೌಡರನ್ನ ಖುದ್ದಾಗಿ ಭೇಟಿ ಮಾಡಿ ಕ್ಷಮೆಯಾಚಿಸ್ತೇನೆ. ಈ ಬಳಿಕವೂ ಜೆಡಿಎಸ್ ಪ್ರತಿಭಟನೆ ಮಾಡಿದ್ರೆ ಮಾಡಲಿ. ದೇಶಕ್ಕೆ ದೇವೇಗೌಡರ ಕೊಡುಗೆಗಳನ್ನ ಸ್ಮರಿಸುತ್ತೇನೆ. ಇದು ನನ್ನ ಕೊನೆಯ ಚುನಾವಣೆ. ಗೆಲ್ಲಲೀ ಬಿಡಲೀ ಇದು ನನ್ನ ಕೊನೆ ಚುನಾವಣೆ. ದೇವೇಗೌಡರ ಸಾವನ್ನ ಬಯಸೋ ಮನಸ್ಸಿನವನಲ್ಲಾ ನಾನು. ಈ ಬಗ್ಗೆ ಖುದ್ದಾಗಿ ಹೋಗಿ ಅರ್ಥೈಸಿ ಮಾತನಾಡಿಸುತ್ತೇನೆ ಎಂದು ಹೇಳಿದರು.
ರಾಜಣ್ಣ ಹೇಳಿದ್ದೇನು?
ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಈಗ ಇಬ್ಬರ ಮೇಲೆ ಕೈ ಹಾಕಿಕೊಂಡು ಹೋಗುತ್ತಿದ್ದಾರೆ. ನಾಲ್ವರ ಮೇಲೆ ಹೋಗುವುದು ಹತ್ತಿರದಲ್ಲೇ ಇದೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಹೇಳಿಕೆ ವಿವಾದಕ್ಕೆ ಸಿಲುಕಿದೆ.
ಮಧುಗಿರಿ ತಾಲ್ಲೂಕಿನ ಕಾವಣದಾಲ ಕಾರ್ಯಕ್ರಮದಲ್ಲಿ ಗುರುವಾರ ಸಾರ್ವಜನಿಕರೊಂದಿಗೆ ಮಾತನಾಡುವಾಗ ರಾಜಣ್ಣ ನಾಲಗೆ ಹರಿ ಬಿಟ್ಟಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ನೀಡಿರುವ ಹೇಳಿಕೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ರಾಜಣ್ಣ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗಿದೆ. ರಾಜಣ್ಣ ಹೇಳಿಕೆಯ ವಿಡಿಯೊವನ್ನು ನೆಟ್ಟಿಗರು ಹಂಚಿಕೊಂಡಿದ್ದು, ಕಿಡಿಕಾರಿದ್ದಾರೆ. ಇಂತಹ ಹೇಳಿಕೆ ನೀಡುವುದು ಸರಿಯೆ ಎಂದು ಪ್ರಶ್ನಿಸಿದ್ದಾರೆ. ಇದು ಅವರ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಟೀಕಿಸಿದ್ದರು.
‘ಇದು ನನ್ನ ಕಡೆಯ ಚುನಾವಣೆಯಾಗಿದ್ದು, ಪ್ರತಿ ಮನೆ ಬಾಗಿಲಿಗೆ ಬಂದು ಮತ ಕೇಳುತ್ತೇನೆ. ನಾನು ಶಾಸಕನಾದರೆ ನೀವು ಶಾಸಕರಾದಂತೆ. ಸರ್ಕಾರದ ಸೇವೆ ಒದಗಿಸದ ಎಲ್ಲ ಅಧಿಕಾರಿಗಳನ್ನು ಪ್ರಶ್ನೆ ಮಾಡಬಹುದು. ಶೋಕಿಗೆ ರಾಜಕಾರಣ ಮಾಡಬೇಡಿ’ ಎಂದು ರಾಜಣ್ಣ ಹೇಳಿದ್ದರು.