ಕರ್ನಾಟಕದಲ್ಲಿ 3ನೇ ಮುಖ್ಯಮಂತ್ರಿ ಕಾಲ ಸನ್ನಿಹಿತ! ಸಂಚಲನ ಮೂಡಿಸಿದ ಟ್ವೀಟ್

ಮೊನ್ನೇ ಅಷ್ಟೇ ಕರ್ನಾಟಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಕೊಟ್ಟು ಹೋದ ಬೆನ್ನಲ್ಲೇ ಇದೀಗ ರಾಜ್ಯದಲ್ಲಿ ಮ್ತತೆ ಸಿಎಂ ಬಸವರಾಜ ಬೊಮ್ಮಾಯಿ ಬದಲಾವಣೆ ಚರ್ಚೆ ಶುರುವಾಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು, (ಆಗಸ್ಟ್.09): ಕರ್ನಾಟಕದಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆ ಚರ್ಚೆಗೆ ಮುನ್ನೆಲೆಗೆ ಬಂದಿದೆ. ಹೌದು....ಆಗಸ್ಟ್ 15ರ ನಂತರ ಸಿಎಂ ಬಸವರಾಜ ಬೊಮ್ಮಾಯಿ ಬದಲಾವಣೆಯಾಗುತ್ತಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಆದ್ರೆ, ಅದು ಸಿದ್ದರಾಮೋತ್ಸವ ಉತ್ಸವದಲ್ಲಿ ಕಳೆದುಹೋಗಿತ್ತು.

ಕಾಂಗ್ರೆಸ್‌ ಕ್ಯಾಂಪ್‌ನ ಇನ್‌ಸೈಡ್ ಮಾಹಿತಿ: 11 ಹಾಲಿ ಶಾಸಕರಿಗೆ ಬಿಗ್‌ ಶಾಕ್....!

ಆದ್ರೆ, ಮೊನ್ನೇ ಅಷ್ಟೇ ಕರ್ನಾಟಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಕೊಟ್ಟು ಹೋದ ಬೆನ್ನಲ್ಲೇ ಇದೀಗ ರಾಜ್ಯದಲ್ಲಿ ಮತ್ತೆ ಸಿಎಂ ಬಸವರಾಜ ಬೊಮ್ಮಾಯಿ ಬದಲಾವಣೆ ಚರ್ಚೆ ಶುರುವಾಗಿದೆ. ರಾಜ್ಯದಲ್ಲಿ ಸಿಎಂ ಬದಲಾವಣೆ ವದಂತಿ ಬಗ್ಗೆ ರಾಜ್ಯ ಕಾಂಗ್ರೆಸ್ ಘಟಕ ಟ್ವೀಟ್ ಮೂಲಕ ವ್ಯಂಗ್ಯವಾಡಿದೆ. 

Related Video