Asianet Suvarna News Asianet Suvarna News

ರಮೇಶ್ ಜಾರಕಿಹೊಳಿ ಜತೆ ಒಳ ಮೈತ್ರಿ, ಲಖನ್ ಬದಲಿಗೆ ಹೊಸ ಹೆಸ್ರು ತೇಲಿ ಬಿಟ್ಟ ಡಿಕೆಶಿ, ಲಕ್ಷ್ಮೀ

Nov 15, 2019, 6:23 PM IST

ಬೆಂಗಳೂರು/ಬೆಳಗಾವಿ, [ನ.15]: ಗೋಕಾಕ್ ಉಪಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿ ಹಾಗೂ ಲಖನ್ ಜಾರಕಿಹೊಳಿ ನಡುವೆ ಸಹೋದರ ಸವಾಲ್ ಏರ್ಪಟ್ಟಿದೆ. 

ಕಾಂಗ್ರೆಸ್ ಗೆ ಅನ್ಯಾಯ ಮಾಡಿದ ಶತಾಯಗತಾಯ ರಮೇಶ್ ಜಾರಕಿಹೊಳಿಯನ್ನು ಸೋಲಿಸಲೇಬೇಕೆಂದು ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ಅಣ್ಣನನ್ನು ಮಣಿಸಲು ತಮ್ಮ ಲಖನ್ ಜಾರಕಿಹೊಳಿಯನ್ನು ಗೋಕಾಕ್ ಅಖಾಡಕ್ಕಿಳಿಸಲಾಗಿದೆ.

ಆದ್ರೆ, ಇದೀಗ ಲಖನ್ ಕೊನೆ ಹಂತದಲ್ಲಿ ರಮೇಶ್ ಜಾರಕಿಹೊಳಿ ಜತೆ ಒಳ ಮೈತ್ರಿ ಮಾಡಿಕೊಳ್ಳಲಿದ್ದಾರೆ ಎನ್ನುವ ಅನುಮಾನ ಕಾಂಗ್ರೆಸ್ ಗೆ ಇದೆ. ಈ ಹಿನ್ನೆಲೆಯಲ್ಲಿ ಡಿಕೆಶಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಗೋಕಾಕ್ ಕ್ಷೇತ್ರಕ್ಕೆ ಹೊಸ ಅಭ್ಯರ್ಥಿಯ ಹೆಸರನ್ನು ತೇಲಿಬಿಟ್ಟಿದ್ದು, ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯ ಕೂಡ ಮಾಡಿದ್ದಾರೆ. ಹಾಗಾದ್ರೆ, ತೇಲಿಬಂದ  ಹೊಸ ಹೆಸರು ಯಾವುದು..? ವಿಡಿಯೋನಲ್ಲಿ ನೋಡಿ...

ನಾಮಪತ್ರ ಸಲ್ಲಿಸಲು ನ.18ರಂದು ಕಡೆಯ ದಿನ. 19ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9ರಂದು ಮತ ಎಣಿಕೆ ನಡೆಯಲಿದೆ.

Video Top Stories