
Karnataka Politics: ಸಿಎಂ ಸಿದ್ದರಾಮಯ್ಯಗೆ ಎದುರಾದ ಅನಿರೀಕ್ಷಿತ ಪ್ರಶ್ನೆ? ಈ ಉತ್ತರ ಯಾರಿಗೆ ವರದಾನ?
ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಸಕರ ಬಲವನ್ನು ನಂಬಿದ್ದರೆ, ಡಿಸಿಎಂ ಡಿ.ಕೆ. ಶಿವಕುಮಾರ್ ಹೈಕಮಾಂಡ್ ಕೃಪೆಯನ್ನು ಅವಲಂಬಿಸಿದ್ದಾರೆ. ಈ ಇಬ್ಬರು ನಾಯಕರ ನಡುವಿನ ಶಕ್ತಿ ಮತ್ತು ಯುಕ್ತಿಯ ಪೈಪೋಟಿಯು ರಾಜ್ಯ ರಾಜಕಾರಣದಲ್ಲಿ ಮುಂದೇನಾಗಲಿದೆ ಎಂಬ ಕುತೂಹಲವನ್ನು ಹುಟ್ಟುಹಾಕಿದೆ.
ಒಬ್ಬರಿಗೆ, ಶಾಸಕರ ಬಲವೇ ತೋಳ್ಬಲ.. ಮತ್ತೊಬ್ಬರಿಗೆ, ಹೈಕಮಾಂಡ್ ಕೃಪಾಶಿರ್ವಾದವೇ ಬಾಹುಬಲ.. ಒಬ್ಬರು ಸಿಎಮ್.. ಮತ್ತೊಬ್ಬರು ಡಿಸಿಎಮ್.. ಇಬ್ಬರೂ ಸೂಪರ್ ಸ್ಟಾರ್‌ಗಳೇ. ಆದ್ರೆ ಇಬ್ಬರ ಗೇಮ್ ಪ್ಲಾನ್ ಮಾತ್ರ ಬೇರೆ ಬೇರೆ. ಸಿದ್ದರಾಮಯ್ಯ ಅವರಿಗೆ ತಮ್ಮ ಜೊತೆಗಿರೋ ಶಾಸಕರ ಬಲದ ಮೇಲೆ ಅತಿಯಾದ ನಂಬಿಕೆ.. ಟ್ರಬಲ್‌ಶೂಟರ್ ಡಿಕೆಶಿ ಅವರಿಗೆ, ದೆಹಲಿಯ ಹೈಕಮಾಂಡ್ ಬಲವೇ ಬಲ.