
News Hour: ಕಾಂಗ್ರೆಸ್‌ನಲ್ಲಿ ಸೃಷ್ಟಿಯಾಯ್ತಾ 3ನೇ ಪವರ್ ಸೆಂಟರ್!
ಈವರೆಗೂ ಸಿದ್ಧರಾಮಯ್ಯ ಬಣ, ಡಿಕೆ ಶಿವಕುಮಾರ್ ಬಣದ ನಡುವೆ ಗುದ್ದಾಡುತ್ತಿದ್ದ ಕಾರ್ಯಕರ್ತರಿಗೆ ಈಗ ಮತ್ತೊಂದು ಬಣದ ಬಿಸಿ ಎದುರಾಗಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಣ ರಾಜ್ಯ ಕಾಂಗ್ರೆಸ್‌ನಲ್ಲಿ ಸೃಷ್ಟಿಯಾಗಿರುವಂತೆ ಕಂಡಿದೆ.
ಬೆಂಗಳೂರು (ನ.7): ರಾಜ್ಯ ಕಾಂಗ್ರೆಸ್ ನಲ್ಲಿ ಮತ್ತೊಂದು ಶಕ್ತಿ ಕೇಂದ್ರ ಸೃಷ್ಟಿ ಆಗಿದೆಯೇ ಎನ್ನುವ ಅನುಮಾನ ಕಾಡಿದೆ. ಈವರೆಗೂ ಸಿದ್ದರಾಮಯ್ಯ ಬಣ,ಶಿವಕುಮಾರ್ ಬಣದ ನಡುವೆ ಕಾರ್ಯಕರ್ತರು ಬಡಿದಾಡಿಕೊಳ್ಳುತ್ತಿದ್ದ ನಡುವೆ ಈಗ ಖರ್ಗೆ ಬಣ ಹುಟ್ಟಿಕೊಂಡಿರುವ ಸಾಧ್ಯತೆ ಕಂಡಿದೆ. ಖರ್ಗೆ ಕಾಂಗ್ರೆಸ್ ಅಧ್ಯಕ್ಷರಾಗ್ತಿದ್ದಂತೆಯೇ ರಾಜ್ಯದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ.
ಖರ್ಗೆ ಭೇಟಿ ಮಾಡಿ ಹಿರಿಯ ನಾಯಕರು ಟಿಕೆಟ್ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಮಾಜಿ ಸ್ಪೀಕರ್ ಕೆ.ಬಿ ಕೋಳಿವಾಡ ಈಗಾಗಲೇ ಖರ್ಗೆ ಅವರನ್ನು ಭೇಟಿ ಮಾಡಿದ್ದಾರೆ. ‘ನಾನು ಅರ್ಜಿ ಹಾಕ್ತೀನಿ, ತಮ್ಮ ಪುತ್ರನೂ ಅರ್ಜಿ ಹಾಕ್ತಾನೆ..!’ ಇಬ್ಬರಿಗೂ ಅವಕಾಶ ಕೊಡಿ ಎಂದು ಖರ್ಗೆ ಎದುರು ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ.
Karnataka Election 2023: ಸಿದ್ದರಾಮಯ್ಯಗೆ ಕ್ಷೇತ್ರ ಯಾವುದಯ್ಯ ಅನ್ನೋದೆ ಟೆನ್ಷನ್?
ಮಾರ್ಗರೆಟ್ ಆಳ್ವಾ, ಅಲ್ಲಂ ವೀರಭದ್ರಪ್ಪ ಸೇರಿ ಹಲವರ ಖರ್ಗೆ ಅವರನ್ನು ಭೇಟಿ ಮಾಡಿದ್ದಾರೆ. ಶುಭಾಶಯ ಕೋರುತ್ತಲೇ ಮುಂದಿನ ವಿಧಾನಸಭೆ ಚುನಾವಣೆಗೆ ನಾಯಕರು ಟಿಕೆಟ್ ಬೇಡಿಕೆ ಇಟ್ಟಿದ್ದಾರೆ. ಈ ನಡುವೆ ಶೇ.50 ಯುವಕರಿಗೆ ಟಿಕೆಟ್ ಎಂದು ಈಗಾಗಲೇ ಖರ್ಗೆ ಘೋಷಣೆ ಮಾಡಿದ್ದಾಗಿದೆ. ಹೀಗಾಗಿ ಹಿರಿಯ ನಾಯಕರಿಂದಲೂ ಖರ್ಗೆ ಭೇಟಿ ಹಾಗೂ ಮನವಿ ನೀಡುವ ಕೆಲಸಗಳು ನಡೆಯುತ್ತಿದೆ.