Asianet Suvarna News Asianet Suvarna News

ಇವತ್ತಿನ ಘಟನೆಗೆ ಬಿಜೆಪಿಯವರೇ ಕಾರಣ; ಕಾಂಗ್ರೆಸ್ ಎಂಎಲ್‌ಸಿ ನಾರಾಯಣ ಸ್ವಾಮಿ

ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಶಾಸಕರು ಸಭಾಪತಿಗಳ  ಕುರ್ಚಿಗಾಗಿ ಕಿತ್ತಾಡಿಕೊಂಡಿದ್ದಾರೆ. ಕಾಂಗ್ರೆಸ್ - ಬಿಜೆಪಿ ಸದಸ್ಯರು ಕೈಕೈ ಮಿಲಾಯಿಸಿದ್ದಾರೆ. ಪರಿಷತ್ ಹೈಡ್ರಾಮಾ ಭಾರೀ ಸದ್ದು ಮಾಡುತ್ತಿದೆ. 

First Published Dec 15, 2020, 6:14 PM IST | Last Updated Dec 15, 2020, 6:14 PM IST

ಬೆಂಗಳೂರು (ಡಿ. 15): ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಶಾಸಕರು ಸಭಾಪತಿಗಳ  ಕುರ್ಚಿಗಾಗಿ ಕಿತ್ತಾಡಿಕೊಂಡಿದ್ದಾರೆ. ಕಾಂಗ್ರೆಸ್ - ಬಿಜೆಪಿ ಸದಸ್ಯರು ಕೈಕೈ ಮಿಲಾಯಿಸಿದ್ದಾರೆ. ಪರಿಷತ್ ಹೈಡ್ರಾಮಾ ಭಾರೀ ಸದ್ದು ಮಾಡುತ್ತಿದೆ. 

'ಗಲಾಟೆಗೆ ಕಾಂಗ್ರೆಸ್ಸಿಗರು ಸಿದ್ಧರಾಗಿ ಬಂದಿದ್ದರು, ಇತಿಹಾಸದಲ್ಲಿ ನಡೆಯಬಾರದ ಘಟನೆಗೆ ಕಾರಣರಾದ್ರು'

'ಇವತ್ತಿನ ಘಟನೆಗೆ ಬಿಜೆಪಿಯವರೇ ಕಾರಣ. ಸಭಾಪತಿಗಳನ್ನು ಸದನಕ್ಕೆ ಬರಬಾರದೆಂದು ಬಿಜೆಪಿಯವರು ಬಾಗಿಲು ಮುಚ್ಚಿದರು. ಇದು ಸರಿಯಲ್ಲ. ಹಾಗಾಗಿ ಕೋಪ ಬಂದಿದ್ದು ನಿಜ. ನಾವು ಕೂರದೇ ಇದ್ದರೆ ಎಂಥೆಂತವರೋ ಕುಳಿತು ಬಿಡುತ್ತಾರೆ. ಆ ಪೀಠಕ್ಕೆ ಮಾಡುವ ಅವಮಾನ ಅದು. ಹಾಗಾಗಿ ನಾವು ಕುಳಿತುಕೊಳ್ಳಲು ಮುಂದಾದೆವು' ಎಂದು ಕಾಂಗ್ರೆಸ್ ಎಂಎಲ್‌ಸಿ ನಾರಾಯಣಸ್ವಾಮಿ ಹೇಳಿದ್ದಾರೆ. 

 

 

Video Top Stories