'ಯುವಕರಿಗೆ ದತ್ತಮಾಲೆ ಹಾಕಿಸೋರು ಮನೆಹಾಳರು': ನಾಲಿಗೆ ಹರಿಬಿಟ್ಟ ಶಾಸಕ ಟಿ.ಡಿ ರಾಜೇಗೌಡ

ಕೇಸರಿ ಶಾಲು, ಕುಂಕುಮ ಹಾಗೂ ದತ್ತಮಾಲೆಯಿಂದ ಹೊಟ್ಟೆ ತುಂಬಲ್ಲ ಎಂದು ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡ ಅಪಹಾಸ್ಯ ಮಾಡಿದ್ದಾರೆ.

Share this Video
  • FB
  • Linkdin
  • Whatsapp

ವಿಧಾನಸಭೆ ಚುನಾವಣೆಯ ಹೊತ್ತಿನಲ್ಲಿ ಕಾಂಗ್ರೆಸ್ ಶಾಸಕ ಟಿ.ಡಿ ರಾಜೇಗೌಡ ಮತ್ತೆ ನಾಲಿಗೆ ಹರಿಬಿಟ್ಟಿದ್ದು, ಹೊಸ ವಿವಾದ ಸೃಷ್ಟಿಸಿದ್ದಾರೆ‌. ಅಯೋದ್ಯೆ ಹೋರಾಟದಲ್ಲಿ ಲಕ್ಷಾಂತರ ಜನರನ್ನು ಬಲಿ ಕೊಟ್ಟರು. ಬಾಬ್ರಿ ಮಸೀದಿ ಉರುಳಿಸುವ ವೇಳೆ ಲಕ್ಷಾಂತರ ಜನ ಬಲಿಯಾದ್ರು. ಯುವಕರಿಗೆ ದತ್ತಮಾಲೆ ಹಾಕಿಸೋರು ಮನೆಹಾಳರು ಎಂದು ರಾಜೇಗೌಡ ಹೇಳಿದ್ದಾರೆ. ಶಾಸಕರ ಹೇಳಿಕೆಗೆ ಹಿಂದೂ ಸಂಘಟನೆಗಳು ಕೆಂಡ ಕಾರಿದ್ದು, ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿವೆ. ಈ ಹಿಂದೆ ಪ್ರಧಾನಿ ಹೊಗಳಿದ್ದ ಶಾಸಕ ರಾಜೇಗೌಡ, ಇದೀಗ ಹಿಂದೂ ಹಾಗೂ ಹಿಂದುತ್ವದ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video