Asianet Suvarna News Asianet Suvarna News

ನಾನು ಕೊಟ್ಟ ಹಣ ವಾಪಸ್ ಕೊಡು: ಗ್ರಾಪಂ ಸದಸ್ಯನಿಗೆ ಶಾಸಕ ಶಿವಲಿಂಗೇಗೌಡ ಧಮ್ಕಿ

ಅರಸೀಕೆರೆ ಶಾಸಕ ಶಿವಲಿಂಗೇಗೌಡ ಹಾಗೂ ಗ್ರಾಮ ಪಂಚಾಯಿತಿ ಸದಸ್ಯನ ನಡುವೆ ವ್ಯವಹಾರ ವಾರ್‌ ನಡೆದಿದೆ.
 

ಅರಸೀಕೆರೆ ಶಾಸಕ ಕೆ.ಎಂ ಶಿವಲಿಂಗೇಗೌಡ ಅವರು ಹಣದ ವಿಚಾರವಾಗಿ ಗ್ರಾಪಂ ಸದಸ್ಯನಿಗೆ ಧಮ್ಕಿ ಹಾಕಿದ್ದು, ಆಡಿಯೋ ವೈರಲ್ ಆಗಿದೆ. ನಾನು ಕೊಟ್ಟಿರುವ  50 ಸಾವಿರ ವಾಪಸ್‌ ಕೊಡು ಎಂದು ಅವಾಜ್ ಹಾಕಿದ್ದು, ಗ್ರಾ.ಪಂ ಸದಸ್ಯ ವಾಸುಗೆ ಜೋರು ಧ್ವನಿಯಲ್ಲಿ ಶಿವಲಿಂಗೇಗೌಡ ತಾಕೀತು ಮಾಡಿದ್ದಾರೆ. ನಾನು ಹಣ ಕೇಳಿರಲಿಲ್ಲ, ನೀವೇ ಅಲ್ವಾ ಕೊಟ್ಟಿದ್ದು ಎಂದು ವಾಸು ಹೇಳಿದ್ದಾರೆ. ಮುಂದಿನ ಚುನಾವಣೆಯಲ್ಲಿ ನನಗೆ ಸಹಾಯ ಮಾಡಲು ಹೇಳಿದ್ದೆ, ಆದ್ರೆ ನೀನು ನನ್ನ ವಿರೋಧ ಬಣದಲ್ಲಿ ಇದ್ದೀಯಾ. ಈಗ ಹಣ ಕೊಡು ಎಂದು ಗ್ರಾಮ ಪಂಚಾಯ್ತಿ ಸದಸ್ಯನಿಗೆ ಧಮ್ಕಿ ಹಾಕಿದ್ದಾರೆ.
 

Video Top Stories