ವಿಜಯೇಂದ್ರ 150 ಕೋಟಿ ಆಮಿಷ: ಬಿಜೆಪಿ ವಿರುದ್ಧವೇ ಅಸ್ತ್ರ ಹೆಣೆದ ಕಾಂಗ್ರೆಸ್‌ ನಾಯಕರು!

ನೂರೈವತ್ತು ಕೋಟಿ ಆಫರ್ ಮಾಡಿದ್ದಾರೆ ಎನ್ನುವ ಕ್ಲಿಪ್ಪಿಂಗ್ ಇದೆ. ಮಾಣಿಪ್ಪಾಡಿ ಹೇಳಿದ್ದಾರೆ. ವಿಡಿಯೋ ಕ್ರಿಯೇಟ್ ಮಾಡಿದ್ದಲ್ಲ. ಬಿಜೆಪಿಯವರು ಧಮ್ಕಿ ಹಾಕಿ ಉಲ್ಟಾ ಹೇಳಿಸೋ ಕೆಲಸ ಮಾಡಿದ್ದಾರೆ. ಪ್ರಕರಣದ ತನಿಖೆಯನ್ನ ಸಿಬಿಐ ಕೊಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಈ ಬಗ್ಗೆ ಚರ್ಚೆ ಮಾಡ್ತೇವೆ, ಅವಶ್ಯಕತೆ ಇದ್ರೆ ತೀರ್ಮಾನ ಮಾಡ್ತೇವೆ: ಗೃಹ ಸಚಿವ ಡಾ. ಜಿ. ಪರಮೇಶ್ವರ್ 

First Published Dec 17, 2024, 11:21 AM IST | Last Updated Dec 17, 2024, 11:21 AM IST

ಬೆಂಗಳೂರು(ಡಿ.17):  ಅನ್ವರ್‌ ಮಾಣಿಪ್ಪಾಡಿ ಹೇಳಿದ್ದನೇ ನಾವು ಹೇಳ್ತಿರೋದು, ಸಿಬಿಐ ತನಿಖೆ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಅವರು 150 ಕೋಟಿ ಆಮಿಷದ ಬಗ್ಗೆ ಸಮರ್ಥಿಸಿಕೊಂಡಿದ್ದಾರೆ.  ಮಾಣಿಪ್ಪಾಡಿ ಈ ಹಿಂದೆ ಸ್ವತಃ ಹೇಳಿದ್ದಾರೆ. ಮೊದಲು ಅವರ ಹೇಳಿದ ಮೇಲೆ ನಾವು ರಿಯಾಕ್ಟ್ ಮಾಡಿದ್ದೇವೆ. ಹಾಗಿದ್ದರೆ ನಾವು ಹೇಳಿದ್ದೆ ಸರಿ. ಮಾಣಿಪ್ಪಡಿ ಪ್ರಕರಣ ಸಿಬಿಐ ಕೊಡುವ ಚರ್ಚೆ ಪ್ರಸ್ತಾಪ ಮಾಡುತ್ತೇವೆ. ಈಗ ಇಲ್ಲ ಅಂತಿರುವುದಕ್ಕೆ ನೀವೆ ಹೇಳಬೇಕು ಎಂದು ಪ್ರಶ್ನಿಸಿದ್ದಾರೆ. 

ಇನ್ನು ಈ ಬಗ್ಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ಮಾಣಿಪ್ಪಾಡಿ ಕೈನಲ್ಲಿ ಬಿಜೆಪಿಯವರು ಹೇಳಿಕೆ ಕೊಡಿಸಿದ್ದಾರೆ.  ದಾಖಲೆಗಳು ಎಲ್ಲೂ ಹೋಗಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ವಕ್ಫ್‌ ಅಮಿಷದ ಬಗ್ಗೆ ಮಾತನಾಡಿದ್ದಾರೆ. ಮಾಣಿಪ್ಪಡಿ ಹೇಳಿಕೆಯನ್ನು ಸಿಎಂ ಉಲ್ಲೇಖ ಮಾಡಿದ್ದಾರೆ.  ದಾಖಲೆಗಳು ಎಲ್ಲೂ ಹೋಗಲು ಸಾಧ್ಯವಿಲ್ಲ. ಈ ಬಗ್ಗೆ ಸಿಬಿಐ ಪತ್ರ ಬರೆಯಲಿ, ನಂತರ ನಾವು ನೋಡುತ್ತೇವೆ. ಅನ್ವರ್ ಮಾನಪ್ಪಾಡಿ ಕೈಯಲ್ಲಿ ಈಗ ಹೇಳಿಕೆ ಕೊಡಿಸಿದ್ದಾರೆ ಎಂದು ಹೇಳಿದ್ದಾರೆ. 

ಬಿಜೆಪಿ- ಕಾಂಗ್ರೆಸ್ ಮಧ್ಯೆ ಸಂಘರ್ಷಕ್ಕೆ ಕಾರಣವಾದ ನೆಹರು ರಹಸ್ಯ ಪತ್ರಗಳು

ನೂರೈವತ್ತು ಕೋಟಿ ಆಫರ್ ಮಾಡಿದ್ದಾರೆ ಎನ್ನುವ ಕ್ಲಿಪ್ಪಿಂಗ್ ಇದೆ. ಮಾಣಿಪ್ಪಾಡಿ ಹೇಳಿದ್ದಾರೆ. ವಿಡಿಯೋ ಕ್ರಿಯೇಟ್ ಮಾಡಿದ್ದಲ್ಲ. ಬಿಜೆಪಿಯವರು ಧಮ್ಕಿ ಹಾಕಿ ಉಲ್ಟಾ ಹೇಳಿಸೋ ಕೆಲಸ ಮಾಡಿದ್ದಾರೆ. ಪ್ರಕರಣದ ತನಿಖೆಯನ್ನ ಸಿಬಿಐ ಕೊಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಈ ಬಗ್ಗೆ ಚರ್ಚೆ ಮಾಡ್ತೇವೆ, ಅವಶ್ಯಕತೆ ಇದ್ರೆ ತೀರ್ಮಾನ ಮಾಡ್ತೇವೆ. ಈ ರೀತಿಯ ವಿಚಾರದಲ್ಲಿ ಪರ ವಿರೋಧದ ಠೀಕೆಗಳು ಟಿಪ್ಪಣಿ ಸಾಮಾನ್ಯ. ಸರ್ಕಾರ ಮಟ್ಟದಲ್ಲಿ ಯೋಚನೆ ಮಾಡಿ ತೀರ್ಮಾನ ಮಾಡ್ತೇವೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.