Asianet Suvarna News Asianet Suvarna News

ವಂದೇ ಮಾತರಂ ಹಾಡಲು ಸಿದ್ದರಾಮಯ್ಯ ಹಿಂದೇಟು, ಮತ್ತೊಂದು ವಿವಾದದಲ್ಲಿ ಕಾಂಗ್ರೆಸ್!

ಏಯ್ ವಂದೇ ಮಾತರಂ ಬೇಡಪ್ಪ. ಇದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಆಡಿದ ಮಾತು. ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಸಿದ್ದು ವಂದೇ ಮಾತರಂ ಹಾಡಲು ನಿರಾಕರಿಸಿದ ಘಟನೆ ನಡೆದಿದೆ. ಈ ವಿಡಿಯೋ ವೈರಲ್ ಆಗಿದೆ. ಸಿದ್ದ ಧೋರಣೆಗೆ ಭಾರಿ ಆಕ್ರೋಶಗಳು ವ್ಯಕ್ತವಾಗುತ್ತಿದೆ.
 

ಬೆಂಗಳೂರು(ನ.26):  ಸಂವಿಧಾನ ದಿನಾಚರಣೆಯಂದೇ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ವಂದೇ ಮಾತರಂ ಹಾಡಲು ಹಿಂದೇಟು ಹಾಕಿದ ಘಟನೆ ನಡೆದಿದೆ. ಕೆಪಿಸಿಸಿ ಕಚೇರಿಯಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಆರಂಭದಲ್ಲಿ ನಾಯಕ ಸಲೀಮ್ ಅಹಮ್ಮದ್ ಮೊದಲು ವಂದೇ ಮಾತರಂ ಎಂದಿದ್ದಾರೆ. ತಕ್ಷಣ ರೊಚ್ಚಿಗೆದ್ದ ಸಿದ್ದರಾಮಯ್ಯ ಏ ವಂದೇ ಮಾತರಂ ಬೇಡ ಎಂದಿದ್ದಾರೆ. ತಾವಾಡಿದ ಮಾತು ವಿವಾದಕ್ಕೆ ಕಾರಣವಾಗಲಿದೆ ಎಂದು ಅರಿತ ಸಿದ್ದರಾಮಯ್ಯ ಕೆಲ ಹೊತ್ತಿನ ಬಳಿಕ ಹಾಡೋದಾದ್ರೆ ವಂದೇ ಮಾತರಂ ಹಾಡ್ರಪ್ಪ ಎಂದಿದ್ದಾರೆ. ಇಷ್ಟೇ ಅಲ್ಲ ಸಿದ್ದರಾಮಯ್ಯ ಹಾಡಬೇಡ ಅಂತ ಹೇಳಿದ ಎಂದಾಗುತ್ತೆ ಎಂದಿದ್ದಾರೆ. ಸಿದ್ದು ಮಾತಿನ ಬಳಿಕ ಕಾಂಗ್ರೆಸ್ ನಾಯಕರು ಅನಿವಾರ್ಯವಾಗಿ ವಂದೇ ಮಾತರಂ ಹಾಡಿದ್ದಾರೆ. ಇತ್ತ ಸಿದ್ದರಾಮಯ್ಯ ವಂದೇ ಮಾತರಂ ಹಾಡಿನ ವೇಳೆ ಎದ್ದು ನಿಂತರು. 
 

Video Top Stories