ಎಂಬಿ ಪಾಟೀಲ್ ನನ್ನ ಆಪ್ತ..  ಇನ್ನು ಮುಂದೆ ಅವರದ್ದೇ ನಾಯಕತ್ವ

* ಕೆಪಿಸಿಸಿ ಪ್ರಚಾರ ಸಮಿತಿ ಹೊಣೆಗಾರಿಕೆ ಎಂಬಿ ಪಾಟೀಲ್ ಗೆ
* ಸ್ನೇಹಿತನಿಗೆ ಶುಭಾಶಯ ತಿಳಿಸಿದ ಡಿಕೆ ಶಿವಕುಮಾರ್
* ಸಿದ್ಧಾಂತದ ಅಡಿ ಕೆಲಸ ಮಾಡಿಕೊಂಡು ಬಂದಿದ್ದೇವೆ
* ಜಾತಿ-ಧರ್ಮದ ಆಧಾರದಲ್ಲಿ ಸಮಾಜ ಒಡೆಯುವ ಕೆಲಸ ಬಿಜೆಪಿ ಮಾಡುತ್ತಿದೆ 

First Published Mar 28, 2022, 7:46 PM IST | Last Updated Mar 28, 2022, 7:46 PM IST

ಬೆಂಗಳೂರು(ಮಾ. 28)  ಕೆಪಿಸಿಸಿ (KPCC) ಪ್ರಚಾರ ಸಮಿತಿ ಹೊಣೆಗಾರಿಯನ್ನು ಕಾಂಗ್ರೆಸ್ ಹಿರಿಯ ನಾಯಕ ಎಂಬಿ ಪಾಟೀಲ್ (MB Patil) ವಹಿಸಿಕೊಂಡಿದ್ದಾರೆ. ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar)  ಎಲ್ಲರೂ ಎಂಬಿ ಪಾಟೀಲ್ ನಾಯಕತ್ವದಲ್ಲಿ ಕೆಲಸ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಕರ್ನಾಟಕ ಕಾಂಗ್ರೆಸ್‌ ನಲ್ಲಿ ಏನಾಗುತ್ತಿದೆ?

ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ, ಕಾಂಗ್ರೆಸ್ (Congress) ಅಧಿಕಾರ ಎಲ್ಲ ವರ್ಗದವರ ಅಧಿಕಾರ.  ಕಾರ್ಯಕರ್ತರೆಲ್ಲರೂ ಒಂದಾಗಿ ಕೆಲಸ ಮಾಡಬೇಕು ಎಂದು ಡಿಕೆ ಶಿವಕುಮಾರ್ ತಿಳಿಸಿದರು.