Karnataka Politics: ನಿಜವಾಗ್ಲೂ ಡಿಕೆಶಿ, ಸಿದ್ದು ಮಧ್ಯೆ ಭಿನ್ನಾಭಿಪ್ರಾಯ ಇದ್ಯಾ?: ಜಾರಕಿಹೊಳಿ ಹೇಳಿದ್ದಿಷ್ಟು
* ಚುನಾವಣೆಯ 6 ತಿಂಗಳ ಮೊದಲು ಪಕ್ಷದ ಅಭ್ಯರ್ಥಿಗಳ ಘೋಷಣೆಗೆ ಒತ್ತಡ
* ರಾಜ್ಯದಲ್ಲಿ ಚುನಾವಣೆ ಯಾವ ಸಂದರ್ಭದಲ್ಲಿ ಬಂದರು ಸಹ ಎದುರಿಸಲು ಪಕ್ಷ ಸಿದ್ಧ
* ಯಾರು ಸಹ ಪಕ್ಷವನ್ನು ಬಿಟ್ಟು ಹೋಗುವ ವಿಚಾರ ಸಹ ಇಲ್ಲ
ಬಾಗಲಕೋಟೆ(ಮಾ.26): ರಾಜ್ಯದ ವಿಧಾನಸಭೆಗೆ(Karnataka Assembly Election) 6 ತಿಂಗಳ ಮೊದಲೇ ಚುನಾವಣೆ ಬರುವ ಸಾಧ್ಯತೆ ಇದೆ. ಆ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಚುನಾವಣೆಯ 6 ತಿಂಗಳ ಮೊದಲು ಘೋಷಣೆ ಮಾಡಬೇಕೆನ್ನುವ ಒತ್ತಡವಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ(Satish Jarkiholi) ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಚುನಾವಣೆ ಯಾವ ಸಂದರ್ಭದಲ್ಲಿ ಬಂದರು ಸಹ ಎದುರಿಸಲು ಪಕ್ಷ ಸಿದ್ಧವಾಗಿದೆ. ಅಭ್ಯರ್ಥಿಗಳನ್ನು ಬೇಗನೆ ಘೋಷಣೆ ಮಾಡಬೇಕೆನ್ನುವ ಒತ್ತಡವು ಸಹ ಇರುವುದರಿಂದ ಪಕ್ಷ ಈ ನಿಟ್ಟಿನಲ್ಲಿ ಯೋಚಿಸಲಿದೆ ಎಂದರು.
Karnataka BJP ಸಿಎಂ ಮಾಡುವಾಗಲೇ 6 ತಿಂಗ್ಳು ಷರತ್ತು ಹಾಕಿ ಪ್ರಮಾಣವಚನಕ್ಕೆ ಅವಕಾಶ, ಜಾರಕಿಹೊಳಿ ಬಾಂಬ್
ಪಕ್ಷದಲ್ಲಿ ಡಿ.ಕೆ.ಶಿವಕುಮಾರ(DK Shivakumar), ಸಿದ್ದರಾಮಯ್ಯ(Siddaramaiah) ಅವರ ನಡುವೆ ಯಾವ ಭಿನ್ನಾಭಿಪ್ರಾಯಗಳು ಇಲ್ಲ. ಯಾರು ಸಹ ಪಕ್ಷವನ್ನು ಬಿಟ್ಟು ಹೋಗುವ ವಿಚಾರ ಸಹ ಇಲ್ಲ. ಎಲ್ಲರೂ ಒಗ್ಗಟ್ಟಾಗಿ ಪಕ್ಷವನ್ನು ಮುನ್ನಡೆಸುತ್ತೇವೆ ಎಂದು ತಿಳಿಸಿದರು.
ಹಿಜಾಬ್(Hijab) ಸಂಬಂಧದ ವಿಷಯದಲ್ಲಿ ಮಾತನಾಡುವ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಹಿಂದೂ ಸ್ವಾಮೀಜಿಗಳು ಸಹ ತಲೆ ಮೇಲೆ ಬಟ್ಟೆ ಹಾಕುತ್ತಾರೆ ಎಂಬ ಹೇಳಿಕೆ ಕುರಿತು ನನಗೆ ಗೊತ್ತಿಲ್ಲ. ನನಗೆ ಗೊತ್ತಿರುವ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ. ಯಾವ ರೀತಿಯಿಂದ ಅವರು ಹೇಳಿದ್ದಾರೆ ಎಂಬುವುದು ಗೊತ್ತಿಲ್ಲ. ಹೀಗಾಗಿ ಏನು ಪ್ರತಿಕ್ರಿಯಿಸುವುದಿಲ್ಲ ಎಂದರು.
ಹಿಂದೂ(Hindu), ಮುಸ್ಲಿಂ(Muslim) ವ್ಯಾಪಾರ ನಿಷೇಧದ ವಿಷಯ ಸಕ್ಸಸ್ ಆಗುವುದಿಲ್ಲ. ಸಾವಿರಾರು ವರ್ಷಗಳಿಂದ ವ್ಯಾಪಾರವನ್ನು ಕೂಡಿಕೊಂಡು ಮಾಡುತ್ತ ಬಂದಿದ್ದಾರೆ. ಸುಮ್ಮನೆ ರಾಜಕೀಯಕ್ಕಾಗಿ ಈ ರೀತಿ ಮಾಡುವುದು ಸರಿಯಲ್ಲ. ಬಿಜೆಪಿಯವರಿಗೆ ಹರ್ಷ ಕೊಲೆ, ಹಿಜಾಬ್‌ನಂತಹ ವಿಷಯಗಳು ಬೇಕಿವೆ. ಯಾರೋ ಹೇಳುತ್ತಾರೆ ಅಂದ ಮಾತ್ರಕ್ಕೆ ಹಿಂದುಗಳನ್ನಾಗಲಿ, ಮುಸ್ಲಿಮರನ್ನಾಗಲಿ ಹೊರಹಾಕಲು ಸಾಧ್ಯವಿಲ್ಲ. ಚುನಾವಣೆ ಬರುತ್ತಿರುವುದರಿಂದ ಬಿಜೆಪಿ ತಿಂಗಳಿಗೊಂದು ಇಂತಹ ವಿಷಯವನ್ನು ತರುತ್ತದೆ. ಈ ಕುರಿತು ನಾವು ಜಾಗೃತರಾಗಬೇಕಿದೆ ಎಂದರು.
Karnataka Politics ನಮ್ಮ ನಾಯಕ ಸಿದ್ದರಾಮಯ್ಯ ಹೇಳಿದ್ದು ನಿಜ, ಜಾರಕಿಹೊಳಿ ಹೊಸ ಬಾಂಬ್
ಸಭಾಪತಿ ಸ್ಥಾನದಲ್ಲಿ ಕುರಿತು ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಆರ್‌ಎಸ್‌ಎಸ್ ಕುರಿತು ಹಾಗೂ ಆರ್‌ಎಸ್‌ಎಸ್‌ನಿಂದಲೇ(RSS) ನಾವೆಲ್ಲ ಬಂದಿದ್ದು ಎಂದು ನೀಡಿರುವ ಹೇಳಿಕೆಯನ್ನು ಒಳ್ಳೆಯ ರಾಜಕಾರಣವನ್ನು ಇಂದು ನಾವು ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂಬಂತಾಗಿದೆ. ಸದ್ಯ ರಾಜ್ಯ ಸೇರಿದಂತೆ ಬೇರೆಲ್ಲಿಯು ಒಳ್ಳೆಯ ರಾಜಕಾರಣ(Politics) ಕಾಣುತ್ತಿಲ್ಲ. ಈ ಹಿಂದೆ ಅರಸು ಅವರ ಕಾಲದ ರಾಜಕೀಯವೇ ಬೇರೆ, ಸದ್ಯದ ರಾಜಕೀಯವೇ ಬೇರೆಯಾಗಿದೆ ರಾಜಕಾರಣ ಗಾಂರ್ಭೀಯತೆ ಕಳೆದುಕೊಳ್ಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಿಜೆಪಿಗೆ ಹೋದವರೆಲ್ಲ ವಾಪಸ್ ಕಾಂಗ್ರೆಸ್‌ಗೆ ಬರ್ತಾರಾ?: ಜಾರಕಿಹೊಳಿ ಹೇಳಿದ್ದಿಷ್ಟು
ಬೆಳಗಾವಿ: ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ(BJP) ಸೇರಿರುವ ಕೆಲ ಶಾಸಕರು ಮರಳಿ ಕಾಂಗ್ರೆಸ್‌ಗೆ ಸೇರಲು ಆಸಕ್ತಿ ತೋರಿದ್ದಾರೆ. ಆದರೆ, ಬಿಜೆಪಿಗೆ ಸೇರಿರುವ ಎಲ್ಲ ಶಾಸಕರು ಕಾಂಗ್ರೆಸ್‌ಗೆ ಮರಳಿ ಸೇರುತ್ತಾರೆ ಎಂದು ನಾನು ಹೇಳಿಕೆ ನೀಡಿಲ್ಲ ಎಂದು ಕೆಪಿಸಿಸಿ(KPCC) ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಫೆ.14 ರಂದು ದಾವಣಗೆರೆಯಲ್ಲಿ ಮಾತನಾಡಿದ್ದ ಅವರು, ನಾನು ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರಿರುವ ಕೆಲ ಶಾಸಕರು ಪಕ್ಷಕ್ಕೆ ಮರಳಲಿದ್ದಾರೆ ಎಂದು ಹೇಳಿಕೆ ನೀಡಿದ್ದೇನೆ. ಆದರೆ, ಸುದ್ದಿವಾಹಿನಿ ಹಾಗೂ ಪತ್ರಿಕೆಗಳಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರಿರುವ ಎಲ್ಲ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಮರಳಲಿದ್ದಾರೆ ಎಂಬ ಸುದ್ದಿ ಪ್ರಕಟವಾಗಿದೆ. ಆದರೆ, ನಾನು ಈ ರೀತಿ ಹೇಳಿಕೆ ನೀಡಿಲ್ಲ ಎಂದು ಅವರು ತಿಳಿಸಿದ್ದರು.