Asianet Suvarna News Asianet Suvarna News

ಕಾಂಗ್ರೆಸ್‌ನ ಸರ್ವನಾಶದ ಬಗ್ಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ

ಕಾಂಗ್ರೆಸ್‌ ಪಕ್ಷದಲ್ಲಿ ಯಾವುದೇ ಚುನಾವಣೆ ಸೋತರೆ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿಯನ್ನು ಹೊಣೆ ಮಾಡುತ್ತಾರೆ. ಸೋಲು, ಗೆಲುವಿನ ಹೊರೆಯನ್ನು ಬೇರೆಯವರ ಮೇಲೆ ಹಾಕಿ ತಪ್ಪಿಸಿಕೊಳ್ಳುವುದನ್ನು ಮೊದಲು ಬಿಡಬೇಕು ಎಂದು ಖರ್ಗೆ ಹೇಳಿದ್ದಾರೆ. 

ಬೆಂಗಳೂರು (ನ. 20): ಕಾಂಗ್ರೆಸ್‌ ಪಕ್ಷದಲ್ಲಿ ಒಬ್ಬ ಕಾರ್ಪೊರೇಟರನ್ನು ಗೆಲ್ಲಿಸಿಕೊಂಡು ಬರಲು ಶಕ್ತಿ ಇಲ್ಲದವರು ಕುಳಿತಲ್ಲೇ ಕಾರುಬಾರು ನಡೆಸುತ್ತಿದ್ದಾರೆ. ಚುನಾವಣೆ ಸೋಲಿಗೆ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಅವರನ್ನು ಹೊಣೆಗಾರರು ಎಂದು ಆರೋಪಿಸುತ್ತಾರೆ. ಪಕ್ಷದೊಳಗಿನ ಇಂತಹ ನಾಯಕರ ನಡವಳಿಕೆ ತೀವ್ರ ನೋವುಂಟುಮಾಡುತ್ತಿದೆ. ಈ ಧೋರಣೆ ಸರಿಯಾಗದಿದ್ದರೆ ಕಾಂಗ್ರೆಸ್‌ ಪಕ್ಷವೇ ಸರ್ವನಾಶವಾಗಲಿದೆ.

ಸಂಪುಟ ವಿಸ್ತರಣೆ ಸರ್ಕಸ್ ಇನ್ನೂ ಸಸ್ಪೆನ್ಸ್; ಕುತೂಹಲ ಮೂಡಿಸಿದೆ ವರಿಷ್ಠರ ನಡೆ

ಕಾಂಗ್ರೆಸ್‌ ಪಕ್ಷದಲ್ಲಿ ಯಾವುದೇ ಚುನಾವಣೆ ಸೋತರೆ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿಯನ್ನು ಹೊಣೆ ಮಾಡುತ್ತಾರೆ. ಸೋಲು, ಗೆಲುವಿನ ಹೊರೆಯನ್ನು ಬೇರೆಯವರ ಮೇಲೆ ಹಾಕಿ ತಪ್ಪಿಸಿಕೊಳ್ಳುವುದನ್ನು ಮೊದಲು ಬಿಡಬೇಕು. ಹಾಗೆಯೇ ನಮ್ಮನಮ್ಮಲ್ಲೇ ಭಿನ್ನಾಭಿಪ್ರಾಯ ಬಿಡದಿದ್ದರೆ ಪಕ್ಷವನ್ನು ಅಧಿಕಾರಕ್ಕೆ ತರುವುದು ಕಷ್ಟ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

 

Video Top Stories