2025ಕ್ಕೆ ಕಾಂಗ್ರೆಸ್ ಜೆಡಿಎಸ್‌ನಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆ? ಕೇಸರಿ ಸೈನ್ಯಕ್ಕೆ ಸಂಕ್ರಾಂತಿ ಸರ್ಜರಿ, ಏನದು ಸೀಕ್ರೆಟ್?
ಪಕ್ಷದ ರಾಜ್ಯಾಧ್ಯಕ್ಷರನ್ನು ಬದಲಾಯಿಸುವ ಮೂಲಕ ಹೊಸ ವರ್ಷವನ್ನು ಆರಂಭಿಸಬೇಕು ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ತೀರ್ಮಾನ ಮಾಡಿಕೊಂಡಂತಿವೆ. ಜೆಡಿಎಸ್ ಪಕ್ಷದಲ್ಲಿ ಇದು ಸುಲಭವಾಗಿ ಬದಲಾಗಬಹುದು. ಆದ್ರೆ ರಾಜ್ಯ ಕಾಂಗ್ರೆಸ್ ಪಾಳೆಯದಲ್ಲಿ ಅಧ್ಯಕ್ಷ ಸ್ಥಾನ ಬದಲಾವಣೆ ಅಷ್ಟು ಸುಲಭವಿಲ್ಲ ಎಂದು ಹೇಳಲಾಗುತ್ತಿದೆ.
ಬೆಂಗಳೂರು: ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್. ಈ ಮೂರು ಪಕ್ಷಗಳು ಹೊಸ ವರ್ಷಕ್ಕೆ ಹೊಸ ಹುರುಪಿನೊಂದಿಗೆ ಹೆಜ್ಜೆಯನ್ನಿಡುವ ಪ್ರಯತ್ನ ಮತ್ತು ಪ್ಲಾನ್‌ನಲ್ಲಿವೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆ ಸಾಧ್ಯತೆಗಳಿವೆ.
ಹಾಗೆನೇ ಒಳ ಬೇಗುದಿಯಿಂದ ಬೇಸತ್ತು ಹೋಗಿರುವ ರಾಜ್ಯ ಬಿಜೆಪಿ, ಅದೆಲ್ಲದಕ್ಕು ಮುಕ್ತಾಯ ಹಾಡಿ ಹೊಸ ವರ್ಷಕ್ಕೆ ಹೊಸ ಚಿಗುರು ಅನ್ನೋ ಹಾಗೆ ಹೊಸ ಭರವಸೆಗಳೊಂದಿಗೆ ಹೆಜ್ಜೆಗಳನ್ನಿಡುವ ಪ್ರಯತ್ನದಲ್ಲಿದೆ. ಬರಲಿರುವ ಹೊಸ ವರ್ಷಕ್ಕೆ ಮೂರು ಪಕ್ಷಗಳ ಹೊಸ ಲೆಕ್ಕಚಾರಗಳೇನು ಅನ್ನೋದರ ಕುರಿತು ಒಂದಿಷ್ಟು ಇಲ್ಲಿ ನೋಡೋಣ.