
ಅಂದು ಎಸ್ಎಂ ಕೃಷ್ಣ, ಈಗ ಡಿಕೆ ಶಿವಕುಮಾರ್, ಒಂದೇ ಮಾತಿನಲ್ಲಿ ಕನಸು ಬಿಚ್ಚಿಟ್ಟ ಡಿಕೆ
ಇದು ಕೊನೆಯ ಚುನಾವಣೆ ಎಂದು ಸಿದ್ದರಾಮಯ್ಯ ಸಿಎಂ ಕುರ್ಚಿಗೆ ಟವಲ್ ಹಾಕಿದ್ದರೆ, ಇತ್ತ ಡಿಕೆ ಶಿವಕುಮಾರ್ ಒಕ್ಕಲಿಗ ಮುಖ್ಯಮಂತ್ರಿಯಾಗಲು ಒಕ್ಕಲಿಗ ಸಮುದಾಯದ ಬೆಂಬಲ ಬೇಕು ಎಂದಿದ್ದಾರೆ. ಇದು ಸಿಎಂ ಕುರ್ಚಿಗಾಗಿ ಡಿಕೆಶಿ ಹಾಗೂ ಸಿದ್ದರಾಮಯ್ಯ ನಡುವಿನ ಮತ್ತೊಂದು ಯುದ್ದಕ್ಕೆ ವೇದಿಕೆ ರೆಡಿ ಮಾಡಿದೆ.
ಎಸ್ಎಂ ಕೃಷ್ಣ ಅಂದು ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಮುಖ್ಯಮಂತ್ರಿಯಾಗಿದ್ದಾರೆ. ಇದೀಗ ಡಿಕೆ ಶಿವಕುಮಾರ್ ಸಿಎಂ ಮಾಡುವ ಅವಕಾಶ ಮತ್ತೆ ಒಕ್ಕಲಿಗ ಸಮುದಾಯಕ್ಕೆ ಬಂದಿದೆ ಎಂದು ಹೇಳುವ ಮೂಲಕ ಡಿಕೆ ಶಿವಕುಮಾರ್ ಸಿಎಂ ಕನಸು ಬಿಚ್ಚಿಟ್ಟಿದ್ದಾರೆ. ಈ ಹೇಳಿಕೆ ಜೊತೆ ಹಲವು ಸಂದೇಶ ರವಾನಿಸಿದ್ದಾರೆ. ಹಾಗಂತ ಕಾಂಗ್ರೆಸ್‌ನಲ್ಲಿ ಜಾತಿ, ಸಮುದಾಯಗಳ ಬೆಂಬಲದೊಂದಿಗೆ ಅಧಿಕಾರಕ್ಕೆ ಬಂದ ಉದಾಹರೆ ಇದೆ. ವಿರೇಂದ್ರ ಪಾಟೀಲ್ ನೇತೃತ್ವದಲ್ಲಿ ಚುನಾವಣೆ ಎದುರಿಸಿದಾಗ ಲಿಂಗಾಯಿತ ಮತಗಳು ಕಾಂಗ್ರೆಸ್‌ಗೆ ವರವಾಗಿತ್ತು. ಎಸ್ಎಂ ಕೃಷ್ಣಗೆ ಒಕ್ಕಲಿಗೆ ಮತಗಳು ವರವಾಗಿತ್ತು. ಇದೀಗ ಡಿಕೆ ಶಿವಕುಮಾರ್‌ಗೆ ಒಕ್ಕಲಿಗ ಮತಗಳು ಬೀಳುತ್ತಾ? ಇಲ್ಲಿದೆ ವಿವರ.