ನಾವು ಈ ಬಾರಿ ಒಳ್ಳೆಯ ಚುನಾವಣೆ ಮಾಡಿದ್ದು, ಇನ್ನು ಉತ್ತಮವಾಗಿ ಮಾಡಬಹುದಿತ್ತು: ಕಾಂಗ್ರೆಸ್ ಅಭ್ಯರ್ಥಿ ಗೌತಮ್

ಕೋಲಾರ ಕಾಂಗ್ರೆಸ್ ನಲ್ಲಿ ಗುಂಪುಗಾರಿಕೆ ಇಲ್ಲ, ಒಗ್ಗಟಾಗಿ ಕೆಲಸ ಮಾಡಿದ್ದೇವೆ. ಮುನಿಯಪ್ಪನವರು 2 ಬಾರಿ ಪ್ರಚಾರ ಮಾಡಿದ್ದಾರೆ ಎಂದು  ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಹೇಳಿದ್ದಾರೆ.
 

First Published Jun 4, 2024, 4:44 PM IST | Last Updated Jun 4, 2024, 4:45 PM IST

ಕೋಲಾರ : ನಾವು ಈ ಬಾರಿ ಒಳ್ಳೆಯ ಚುನಾವಣೆ ಮಾಡಿದ್ದೇವೆ. ಇನ್ನು ಉತ್ತಮವಾಗಿ ಚುನಾವಣೆ ಮಾಡಬಹುದಿತ್ತು ಎಂದು ಕೋಲಾರದಲ್ಲಿ ಪರಾರ್ಜಿತ ಕಾಂಗ್ರೆಸ್ ಅಭ್ಯರ್ಥಿ ಗೌತಮ್( Congress candidate Gautham) ಹೇಳಿದ್ದಾರೆ. ನಾವು ಈ ಬಾರಿ ಒಳ್ಳೆಯ ಚುನಾವಣೆ ಮಾಡಿದ್ದೇವೆ. ಇನ್ನು ಉತ್ತಮವಾಗಿ ಚುನಾವಣೆ ಮಾಡಬಹುದಿತ್ತು. ಗೆಲುವಿನ ವಿಶ್ವಾಸ ಇತ್ತು, ಮತದಾರರ ಮನಸ್ಸಿನಲ್ಲಿ ಏನಿತ್ತು ಅಂತ ಈಗ ಗೊತ್ತಾಗಿದೆ. ಕೋಲಾರದಲ್ಲಿ(Kolar) ಜೆಡಿಎಸ್(JDS)- ಬಿಜೆಪಿ(BJP) ಮೈತ್ರಿ ಸಕ್ಸಸ್ ಆಗಿದೆ. ಕೋಲಾರ ಕಾಂಗ್ರೆಸ್ ನಲ್ಲಿ(Congress) ಗುಂಪುಗಾರಿಕೆ ಇಲ್ಲ, ಒಗ್ಗಟಾಗಿ ಕೆಲಸ ಮಾಡಿದ್ದೇವೆ. ಮುನಿಯಪ್ಪನವರು 2 ಬಾರಿ ಪ್ರಚಾರ ಮಾಡಿದ್ದಾರೆ. ನನಗೆ 10 ದಿನ ಹೆಚ್ಚಿಗೆ ಕಾಲ ಸಿಕ್ಕಿದ್ರೆ ಸರಿ ಇತ್ತು. ಕಾಂಗ್ರೆಸ್ ಕಾರ್ಯಕರ್ತರಿಗೆ ಧನ್ಯವಾದಗಳು ತಿಳಿಸುತ್ತೇವೆ. ಇದು ನಮಗೆ ಆಘಾತ ಕೊಟ್ಟಿರೋದು ನಿಜ ಎಂದು ಗೌತಮ್‌ ಹೇಳಿದರು.

ಇದನ್ನೂ ವೀಕ್ಷಿಸಿ:  ಹಾಸನ: ಪ್ರಜ್ವಲ್‌ ರೇವಣ್ಣ ಕಾರ್‌ ಡ್ರೈವರ್‌ ಹೊತ್ತು ಸಂಭ್ರಮಿಸಿದ ಕಾಂಗ್ರೆಸ್‌ ಕಾರ್ಯಕರ್ತರು