ಸಿಟಿ ರವಿ, ಬೊಮ್ಮಾಯಿ ವಿರುದ್ಧ ಯಾರಾಗ್ತಾರೆ ಕೈ ಅಭ್ಯರ್ಥಿ: ಕುತೂಹಲ ಹುಟ್ಟಿಸಿದ ಕಾಂಗ್ರೆಸ್ 4ನೇ ಪಟ್ಟಿ

ಮುಂದಿನ ವಿಧಾನಸಭಾ ಚುನಾವಣೆಗೆ ರಾಜ್ಯ ಕಾಂಗ್ರೆಸ್ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೂರನೇ ಪಟ್ಟಿಯಲ್ಲಿ ಒಟ್ಟು 43 ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್‌ ಬಿಡುಗಡೆ ಮಾಡಿದ್ದು,  4ನೇ ಪಟ್ಟಿಕುತೂಹಲಕಾರಿಯಾಗಿದೆ.

First Published Apr 18, 2023, 1:11 PM IST | Last Updated Apr 18, 2023, 1:11 PM IST

ಮುಂದಿನ ವಿಧಾನಸಭಾ ಚುನಾವಣೆಗೆ ರಾಜ್ಯ ಕಾಂಗ್ರೆಸ್ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೂರನೇ ಪಟ್ಟಿಯಲ್ಲಿ ಒಟ್ಟು 43 ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್‌ ಬಿಡುಗಡೆ ಮಾಡಿದೆ. ಇನ್ನು  4ನೇ ಪಟ್ಟಿ ಕುತೂಹಲವಾಗಿದ್ದು, ಹಾಲಿ ಶಾಸಕರ ಭವಿಷ್ಯ ಎನು ಆಗಬಹುದು, ಹಾಗೆ  ಬಿಜೆಪಿಯ ಘಟಾನು ಘಟಿ ನಾಯಕರಾದ ಸಿ ಟಿ ರವಿ ಮತ್ತು ಸಿ ಎಂ ಬೊಮ್ಮಾಯಿ ವಿರುದ್ದ ಯಾರು ಅಭ್ಯರ್ಥಿ ಯಾಗುತ್ತಾರೆ ಎನ್ನವಂತದ್ದು, ಹಾಲಿ ಶಾಸಕರ ಪೈಕಿ ಬಹುತೇಕ ಹರಿಹರ ಶಾಸಕ ರಾಮಪ್ಪಗೆ ಟಿಕೆಟ್‌ ಮಿಸ್‌ ಆಗುತ್ತದೆ ಎಂದು ಹೇಳಲಾಗುತ್ತಿದೆ. ಹಾಗೇ ಅಖಂಡಗೆ ಟಿಕೆಟ್‌ ಕೊಡದಿದ್ದಲ್ಲಿ ತಪ್ಪು ಸಂದೇಶ ರವಾನೆಯಾಗುವ ಸಾಧ್ಯತೆ ಇದೆ. ಇನ್ನು ಸಿದ್ದರಾಮಯ್ಯ ವಿರುದ್ಧ ಸೋಮಣ್ಣ ಹಾಗೂ ಡಿಕೆಶಿ ವಿರುದ್ಧ ಅಶೋಕ್‌ವರನ್ನು ಕಣಕಿಳಿಸಿದ ಬಿಜೆಪಿ ತಂತ್ರಗಾರಿಕೆ ಟಕ್ಕರ್‌ ನೀಡಲು ಕೈ ಪಡೆ ಸಿದ್ದವಾಗಿದೆ .  ಶಿಗ್ಗಾವಿ ಕ್ಷೇತ್ರದಲ್ಲಿ ಸಿಎಂ ವಿರುದ್ದ ವಿನಯ್‌ ಕುಲಕರ್ಣಿ ಕಣಕ್ಕಿಳಿಸುವ ತೀರ್ಮಾನ ಮಾಡಲಾಗಿದೆ. ಹಾಗೆ ಸಿಟಿ ರವಿ ವಿರುದ್ದ  ಹೆಚ್‌ ಡಿ ತಮ್ಮಯ್ಯ ನಿಲ್ಲಿಸುವ ಪ್ಲಾನ್‌ ಮಾಡಿದ್ದು ಎಲ್ಲ ಕುತೂಹಲವನ್ನು  ಕಾಂಗ್ರೆಸ್  4ನೇ ಪಟ್ಟಿ ಕೊನೆಗೊಳಿಸಲಿದೆ.
 

Video Top Stories