
ಸೂಪರ್ ಪವರ್ ಹೊಂದಿದ್ದ ಬಾಳಾ ಠಾಕ್ರೆ ಪಕ್ಷದಲ್ಲಿ ಅಸ್ತಿತ್ವದ ಹೋರಾಟ!
- ಸರ್ಕಾರ್'' ಬಾಳಾ ಸಾಹೇಬ್ ಠಾಕ್ರೆಗಿದ್ದದ್ದು ಅದೆಂಥಾ ಪವರ್..!?
- ಅವರ ಒಂದು ಕಣ್ಸನ್ನೆಗೆ ಇಡೀ ಮಹಾರಾಷ್ಟ್ರವೇ ಮಾತಾಡ್ತಿತ್ತು..!
- ಅವರು ಚಿಟಿಕೆ ಹೊಡೆದ್ರೆ ಲಕ್ಷ ಲಕ್ಷ ಶಿವಸೈನಿಕರು ಎದ್ದು ನಿಲ್ತಿದ್ರು.!
- ಮರಾಠಾ ಆಸ್ಮಿತೆಗಾಗಿ ಹುಟ್ಟಿದ ಪಕ್ಷದೊಳಗೆ ಈಗ ಅಸ್ತಿತ್ವದ ಹೋರಾಟ
ಬಾಳಾ ಸಾಹೇಬ್ ಠಾಕ್ರೆ ಹೆಸರೇ ಶಿವಸೈನಿಕರ ಅತೀ ದೊಡ್ಡ ಬಂಡವಾಳ. ತಮ್ಮ ಹೆಸರನ್ನೇ ಬಂಡವಾಳ ಮಾಡ್ಕೊಂಡು ಬಂಡೆದ್ದ ನಾಯಕರಿಗೆ ಬಾಳಾ ಠಾಕ್ರೆ ಕೊಡ್ತಿದ್ದ ಠಕ್ಕರ್ ಹೇಗಿರ್ತಾ ಇತ್ತು..? ಅವರ ಒಂದು ಅಕ್ಷರಶಕ್ಕೆ ಮುಂಬೈ ಅಕ್ಷರಶಃ ರಣರಂಗವಾಗ್ತಿದ್ದು ಯಾಕೆ..ಶಿವಸೇನೆಯೊಳಗಿನ ಅಂತಯುದ್ಧದಲ್ಲಿ ಎಲ್ಲರ ಟಾರ್ಗೆಟ್ ಒಬ್ಬರೇ. ಅದು ಬಾಳಾ ಸಾಹೇಬ್ ಕೇಶವ ಠಾಕ್ರೆ. ಮರಾಠಾ ಆಸ್ಮಿತೆಗಾಗಿ ಹುಟ್ಟಿದ ಪಕ್ಷದೊಳಗೆ ಈಗ ಅಸ್ತಿತ್ವದ ಹೋರಾಟ ನಡೀತಾ ಇದೆ. ಆ ಹೋರಾಟದಲ್ಲಿ ಕಾರ್ಯಕರ್ತರಿಂದ ಹಿಡಿದು ಮುಖ್ಯಮಂತ್ರಿಯವರೆಗೆ... ಪ್ರತಿಯೊಬ್ಬರಿಗೂ ಬೇಕಿರೋದು ಬಾಳಾ ಠಾಕ್ರೆ ಹೆಸರು.ಕುಸ್ತಿ ಕಾಳಗಕ್ಕೆ ಇಳಿದಿರೋ ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಕೈಯಲ್ಲಿರೋದು ಒಂದೇ ಅಸ್ತ್ರ. ಅದು ಬಾಳಾ ಸಾಹೇಬ್ ಠಾಕ್ರೆ. ಹಾಗಾದ್ರೆ ಠಾಕ್ರೆ ಅನ್ನೋ ಶಕ್ತಿ ಯಾರ ಪಾಲಾಗತ್ತೆ..?