ಗೃಹಜ್ಯೋತಿ ಯೋಜನೆ ಯಾರಿಗಿದೆ..ಯಾರಿಗಿಲ್ಲ. ಬಾಡಿಗೆದಾರನಿಗೂ ಸಿಗುತ್ತಾ ಬಂಪರ್..?
ಗೃಹಜ್ಯೋತಿ ಯೋಜನೆ ಜನರಲ್ಲಿ ಗೊಂದಲವೋ ಗೊಂದಲ..? --ಗೊಂದಲಗಳಿಗೆಲ್ಲ ಬೆಸ್ಕಾಂ ಉತ್ತರ.. ಯಾರಿಗೆ ಸಿಗುತ್ತೆ..? ಯಾರಿಗೆ ಇಲ್ಲ ಈ ಯೋಜನೆ
ಅಂತೂ ಇಂತೂ ಕರ್ನಾಟಕದಲ್ಲಿ ‘ಪಂಚ ಗ್ಯಾರಂಟಿ ಯೋಜನೆ’ ಯುಗ ಶುರುವಾಗೋ ಘಳಿಗೆ ಬಂದೇ ಬಿಟ್ಟಿದೆ. ಒಂದೊಂದು ಗ್ಯಾರಂಟಿ ನೂರಾರು ನಿರೀಕ್ಷೆ ಹುಟ್ಟಿಸಿದೆ, ನಿಜ.. ಅದರಲ್ಲೇ ಕೆಲ ಗ್ಯಾರಂಟಿಗಳ ಬಗ್ಗೆ ಜನರಿಗೆ ಸ್ಪಷ್ಟತೆ ಸಿಗಬೇಕಾಗಿದೆ. ಅದರಲ್ಲೂ ಗೃಹಜ್ಯೋತಿ ಯೋಜನೆ ಬಗ್ಗೆಯಂತೂ ಕನ್ಫ್ಯೂಜನ್. ರಾಜ್ಯ ಸರ್ಕಾರ ಒಂದೊಂದಾಗಿ 5 ಗ್ಯಾರಂಟಿ ಯೋಜನೆಗಳನ್ನ ಜಾರಿ ಮಾಡ್ತಾ ಹೋಗ್ತಿದೆ. ಆದರೆ ಈ ಗೃಹಜ್ಯೋತಿ ಯೋಜನೆಯ ಬಗ್ಗೆಯೇ ಜನರಲ್ಲಿ ಹೆಚ್ಚು ಗೊಂದಲ ಉಂಟಾಗಿರೋದು. ಈಗ ಅದನ್ನೂ ಬೆಸ್ಕಾಂ ದೂರ ಮಾಡಿದೆ. ಒಂದೊಂದು ಗ್ಯಾರಂಟಿ ಯೋಜನೆ ಜಾರಿ ಮಾಡೋದು, ಸರ್ಕಾರಕ್ಕೆ ಒಂದೊಂದೇ ಸವಾಲು ಎದುರಿಸೋ ಹಾಗಾಗಿದೆ. ಅಷ್ಟಕ್ಕೂ ಈ ಗೃಹಜ್ಯೋತಿ ಯೋಜನೆಯಿಂದ ಸರ್ಕಾರ ಮುಂದಿನ ದಿನಗಳಲ್ಲಿ ಎದುರಿಸಲಿರೋ ಸವಾಲು ಏನು ಗೊತ್ತಾ? ಇಲ್ಲಿದೆ ನೋಡಿ ಈ ಪ್ರಶ್ನೆಗೆ ಉತ್ತರ.