ಸರ್ಕಾರದ 4ನೇ ಗ್ಯಾರಂಟಿಗೆ ಕಲಬುರಗಿಯಲ್ಲಿ ಅಧಿಕೃತ ಚಾಲನೆ: ಗೃಹಜ್ಯೋತಿ ಅರ್ಜಿಗೆ ನೋ ಡೆಡ್‌ಲೈನ್

ಸರ್ಕಾರದ 4ನೇ ಗ್ಯಾರಂಟಿ ಗೃಹಜ್ಯೋತಿ ಯೋಜನೆಗೆ ಅಧಿಕೃತ ಚಾಲನೆ ಸಿಕ್ಕಿದೆ. ಕಲಬುರಗಿಯಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ 7 ಜಿಲ್ಲೆಗಳ ಲಕ್ಷಾಂತರ ಮಂದಿ ಭಾಗಿಯಾಗಿದ್ದರು. ಅರ್ಜಿ ಹಾಕಲು ಯಾವುದೇ ಡೆಡ್‌ಲೈನ್‌ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

First Published Aug 5, 2023, 7:21 PM IST | Last Updated Aug 5, 2023, 7:21 PM IST

ಕಲಬುರಗಿ (ಆ.05): ಸರ್ಕಾರದ 4ನೇ ಗ್ಯಾರಂಟಿ ಗೃಹಜ್ಯೋತಿ ಯೋಜನೆಗೆ ಅಧಿಕೃತ ಚಾಲನೆ ಸಿಕ್ಕಿದೆ. ಕಲಬುರಗಿಯಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ 7 ಜಿಲ್ಲೆಗಳ ಲಕ್ಷಾಂತರ ಮಂದಿ ಭಾಗಿಯಾಗಿದ್ದರು. ಅರ್ಜಿ ಹಾಕಲು ಯಾವುದೇ ಡೆಡ್‌ಲೈನ್‌ ಇಲ್ಲ. ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡಾ ಭಾಗಿಯಾಗಿದ್ದರು. ಇವತ್ತಿನ ದಿನ ಐತಿಹಾಸಿಕ ದಿನ. ಜ್ಯೋತಿ ಬೆಳಗಿಸುವ ಮೂಲಕ ಖರ್ಗೆ ಅವರ ತವರು ಕ್ಷೇತ್ರದಲ್ಲಿ ಚಾಲನೆ ನೀಡಿದ್ದೇವೆ. ಚುನಾವಣಾ ಪೂರ್ವದಲ್ಲಿ 5 ಗ್ಯಾರಂಟಿಗಳನ್ನ ಘೋಷಿಸಿ ರಾಜ್ಯದ ಜನರಿಗೆ ವಾಗ್ದಾನ ಮಾಡಿದ್ದೆವು. ನಾನು, ಡಿಕೆಶಿ ಗ್ಯಾರಂಟಿ ಕಾರ್ಡ್‌ಗೆ ಸಹಿ ಮಾಡಿ ಹಂಚಿದ್ದೆವು. ಜನ ಗ್ಯಾರಂಟಿ ನಂಬಿ ಆಶೀರ್ವಾದ ಮಾಡಿದ್ದಾರೆ. ಅಧಿಕಾರಕ್ಕೆ ಬಂದ ಮೇಲೆ ಐದು ಗ್ಯಾರಂಟಿ ತಂದು ನುಡಿದಂತೆ ನಡೆದಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.