ನವೆಂಬರ್​ ಕ್ರಾಂತಿ ಮಧ್ಯೆ ಸಿಎಂ, ಡಿಸಿಎಂ ಹಾಸನಾಂಬೆ ದರ್ಶನ ವಿಶೇಷ ಪೂಜೆ: ಏನಿರಬಹುದು ಜೋಡೆತ್ತು ಪ್ರಾರ್ಥನೆ

'ನವೆಂಬರ್ ಕ್ರಾಂತಿ'ಯ ಚರ್ಚೆಯ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಸನಾಂಬೆ ದೇವಿಯ ದರ್ಶನ ಪಡೆದಿದ್ದಾರೆ. ಡಿಸಿಎಂ ಡಿಕೆಶಿ ಅವರು ಖಡ್ಗಮಾಲಾ ಸ್ತ್ರೋತ್ರವನ್ನು ಪಠಿಸಿದ್ದು, ಈ ದೈವಿಕ ಭೇಟಿಯ ಹಿಂದಿನ ರಾಜಕೀಯ ರಹಸ್ಯವೇನು ಎಂಬ ಕುತೂಹಲ ಮೂಡಿದೆ.

Share this Video
  • FB
  • Linkdin
  • Whatsapp

ನವೆಂಬರ್​ ಕ್ರಾಂತಿ ಮಧ್ಯೆ ಸಿಎಂ, ಡಿಸಿಎಂ ಹಾಸನಾಂಬೆ ದರ್ಶನ.. ಸಿಎಂ ಸಿದ್ದರಾಮಯ್ಯರಿಂದ ಹಾಸನ ಅಧಿದೇವತೆಗೆ ಪೂಜೆ..! ಖಡ್ಗಮಾಲಾ ಸ್ತ್ರೋತ್ರ ಪಠಿಸಿದ ಡಿಕೆ..ದೇವಿ ಕೊಟ್ಟಳಾ ಆ ಸಂದೇಶ..? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಯಾರಿಗೆ ಹಾಸನಾಂಬೆ ಅಭಯ.. ಅಲ್ಲಿ ನಡೆಯುತ್ತಿರೋದು ಸಿಂಹಾಸನ ಸಮರ.. ಅದು ನಡೆಯುತ್ತಿರೋದು ಎರಡು ಮದಗಜಗಳ ಮಧ್ಯೆ.. ಅಲ್ಲಿ ನಾನಾ ಅಸ್ತ್ರಗಳ ಪ್ರಯೋಗವಾಗ್ತಿದೆ.. ಈ ಮಧ್ಯೆ ಆ ಕದನ ಕಲಿಗಳಿಬ್ಬರು ದೇವರ ಮೊರೆ ಹೋಗಿದ್ದಾರೆ.. ಅಲ್ಲವರ ಪ್ರಾರ್ಥನೆ ಏನು ಅನ್ನೋದು ದೈವರಹಸ್ಯ ನಿಜ.. ಆದ್ರೆ ಸದ್ಯದ ಸಂದರ್ಭ ಬೇರೆಯದ್ದೇ ಕಥೆ ಹೇಳ್ತಿದೆ. ಡಿಕೆ ಶಿವಕುಮಾರ್ ಹಾಸನಾಂಬೆಯ ಬಳಿ ಸ್ತ್ರೋತ್ರವೊಂದನ್ನ ಪಠಿಸಿದ್ದಾರೆ.. ಆ ಸ್ತ್ರೋತ್ರದ ಶಕ್ತಿಯೇನು..? ಆ ಸ್ತ್ರೋತ್ರಕ್ಕೊಂದು ಶಕ್ತಿಯಿದೆ.. ಇದೀಗ ಅದೇ ಸ್ತ್ರೋತ್ರವನ್ನ ಹಾಸನಾಂಬೆಯೆದುರು ಪಠಿಸಿದ್ದಾರೆ ಡಿಕೆಶಿ. ಇದೇ ಹಾಸನಾಂಬೆಗೆ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ ಪೂಜೆ ಹೇಗಿತ್ತು..? ಕಳೆದ ವರ್ಷ ದೇವಿ ದರ್ಶನ ನಂತ್ರ ಸಿದ್ದುಗೆ ಸಿಕ್ಕಿದ್ದ ಆ ಫಲವೇನು.? ಇದೆಲ್ಲಾ ಡಿಟೇಲ್ ಈ ವೀಡಿಯೋದಲ್ಲಿದೆ ವೀಕ್ಷಿಸಿ.

Related Video