ನಂಬರ್ ಗೇಮ್ ಲೆಕ್ಕಕ್ಕೇ ಇಲ್ಲ.. ಇಂದ್ರಪ್ರಸ್ಥದ ಲೆಕ್ಕವೇ ಫೈನಲ್! ಪಟ್ಟಾಭಿಷೇಕಕ್ಕೆ ಸಿದ್ಧವಾಯ್ತಾ ಬಂಡೆ ಪ್ರಚಂಡ ವ್ಯೂಹ..?

DK Shivakumars Strategy for CM Post ಕರ್ನಾಟಕದ ಮುಖ್ಯಮಂತ್ರಿ ಪಟ್ಟದ ಪೈಪೋಟಿಯಲ್ಲಿ, ಡಿಕೆ ಶಿವಕುಮಾರ್ ಅವರು ಶಾಸಕರ ಸಂಖ್ಯಾಬಲಕ್ಕಿಂತ ಕಾಂಗ್ರೆಸ್ ಹೈಕಮಾಂಡ್‌ನ ನಿರ್ಧಾರಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಅ.14): ಕರ್ನಾಟಕದಲ್ಲಿ ಮುಖ್ಯಮಂತ್ರಿ ಪಟ್ಟಕ್ಕಾಗಿ ನಡೆಯುತ್ತಿರುವ ಪೈಪೋಟಿಯು ಹೊಸ ತಿರುವು ಪಡೆದುಕೊಂಡಿದೆ. ಕನಕಪುರದ ಬಂಡೆ ಡಿಕೆ ಶಿವಕುಮಾರ್ ಅವರು 'ಸಂಖ್ಯೆಗಳ ಲೆಕ್ಕಾಚಾರಕ್ಕಿಂತ' (Number Game) ದೆಹಲಿಯ ನಿರ್ಧಾರವೇ ಅಂತಿಮ ಎಂದು ಹೇಳುವ ಮೂಲಕ ತಮ್ಮದೇ ಆದ 'ರಾಜಕೀಯ ಗಣಿತ'ವನ್ನು ಮುಂದಿಟ್ಟಿದ್ದಾರೆ.

ಸಿಎಂ ಆಗುವ ವಿಷಯದಲ್ಲಿ ಶಾಸಕರ ಬಲದ ಸಂಖ್ಯೆಯನ್ನು ಲೆಕ್ಕಿಸದೆ, ಹೈಕಮಾಂಡ್‌ನ ಯುಕ್ತಿಯನ್ನು ನಂಬಿ ಡಿಕೆ ಶಿವಕುಮಾರ್ ದೆಹಲಿ ಕಡೆ ಕೈತೋರಿಸುತ್ತಿದ್ದಾರೆ. 'ಶಕ್ತಿಗಿಂತ ಯುಕ್ತಿ ಮೇಲು' ಎಂಬುದು ಅವರ ಅಚಲ ನಂಬಿಕೆ.

ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುತ್ತಾರೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುವ ನಿರ್ಣಾಯಕ ಅಂಶವೆಂದರೆ ಕಾಂಗ್ರೆಸ್‌ನ ಅಧಿನಾಯಕಿ ಸೋನಿಯಾ ಗಾಂಧಿ ಅವರೊಂದಿಗಿನ ಮಾತುಕತೆ. ಹೈಕಮಾಂಡ್‌ನ ಮೇಲಿರುವ ಡಿಕೆಶಿ ಅವರ ವಿಶ್ವಾಸಕ್ಕೆ ಆ ಮಾತುಕತೆಗಳೇ ಮೂಲವಾಗಿರಬಹುದು ಎಂದು ವರದಿಯಾಗಿದೆ.

ನವೆಂಬರ್ 20 ರ ನಂತರ ಈ ಮುಖ್ಯಮಂತ್ರಿ ಪಟ್ಟದ ವಿಷಯವು ನಿರ್ಧಾರವಾಗುವ ಸಾಧ್ಯತೆಯಿದ್ದು, ಅಂದು ಯಾರು ಕೋಟೆಯನ್ನು ಗೆಲ್ಲುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Related Video