ಕ್ಯಾಪ್ಟನ್ ಆಫ್ ದಿ ಶಿಪ್ ಕುಮಾರಣ್ಣ: ಲೋಕಸಭೆಯ ಸನಿಹದಲ್ಲಿ ಇದೆಂಥಾ ಬದಲಾವಣೆ..?

ಹೊಸ ತೀರ್ಮಾನಕ್ಕೂ ಎದುರಾಯ್ತು ಆಕ್ಷೇಪ
ಹೊಸ ನಿರ್ಧಾರಕ್ಕೂ ಎದುರಾಯ್ತು ಆಕ್ಷೇಪ
ದೇವೇಗೌಡರ ವಿರುದ್ಧ ಇಬ್ರಾಹಿಂ ಗರಂ..!

First Published Oct 20, 2023, 2:36 PM IST | Last Updated Oct 20, 2023, 2:36 PM IST

ಒಂದು ಕಡೆಯಲ್ಲಿ ಲೋಕಸಭಾ ಚುನಾವಣೆ ದಿನ ಹತ್ತಿರವಾಗ್ತಾ ಇದೆ. ಇನ್ನೊಂದು ಕಡೆ ಎಲ್ಲ ಪಕ್ಷಗಳು ತಮ್ಮ ತಮ್ಮ ಗೆಲುವಿಗೆ ಪಕ್ಷ ಸಂಘಟನೆಯಲ್ಲಿ ಬ್ಯುಸಿ ಇವೆ. ಬಟ್ ಜಾತ್ಯಾತೀತ ಜನತಾದಳದಲ್ಲಿ ಮಾತ್ರ ಭಾರಿ ಬದಲಾವಣೆ ಕಂಡು ಬಂದಿದೆ. ರಾಜ್ಯಾಧ್ಯಕ್ಷರಾಗಿದ್ದ ಸಿಎಂ ಇಬ್ರಾಹಿಂ(CM Ibrahim) ಅವರನ್ನ ಅತ್ಯಂತ ನಾಜೂಕಾಗಿ ಪಕ್ಷದಿಂದ ವಜಾ ಮಾಡಲಾಗಿದೆ. ಹೊಸ ಅಧ್ಯಕ್ಷರಾಗಿ ಮಾಜಿ ಸಿಎಂ ಕುಮಾರಸ್ವಾಮಿಯವರನ್ನ(HD Kumaraswamy) ನೇಮಕ ಮಾಡಲಾಗಿದೆ. ಲೋಕಸಭೆ (Loksabha)ಎಲೆಕ್ಷನ್ ಹತ್ತಿರವಾಗ್ತಾ ಇರೋ ಸಂದರ್ಭದಲ್ಲಿ ಜೆಡಿಎಸ್(JDS) ಒಂದು ಮಹತ್ವದ ನಿರ್ಧಾರಕ್ಕೆ ಬಂದಿದೆ. ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಇದ್ದ ಸಿಎಂ ಇಬ್ರಾಹಿಂ ಬದಲಾಗಿ ಕುಮಾರಸ್ವಾಮಿ ಅವರು ನೇಮಕವಾಗಿದ್ದಾರೆ. ಇದೊಂದು ಘೋಷಣೆ ಬಂದಿದ್ದು ಜೆಡಿಎಸ್ ರಾಷ್ಟ್ರಾಧ್ಯಕ್ಷ ಮಾಜಿ ಪಿಎಂ ದೇವೆಗೌಡರರಿಂದ. ಸಿಎಂ ಇಬ್ರಾಹಿಂ ಬಹಿರಂಗವಾಗಿಯೇ ಕುಮಾರಸ್ವಾಮಿ ಅವರ ವಿರುದ್ಧ ಮಾತನ್ನಾಡೋಕೆ ಶುರು ಮಾಡಿದ್ದರು. ಬಿಜೆಪಿ ಜೊತೆಗಿನ ಮೈತ್ರಿ ಬಗ್ಗೆಯೂ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಎನ್ ಡಿ ಎ ಮೈತ್ರಿಗೆ ನನ್ನ ಬೆಂಬಲವಿಲ್ಲ ಅನ್ನೋದ್ರ ಜೊತೆಗೆ ನಾನೇ ಒರಿಜಿನಲ್  ಜೆಡಿಎಸ್ ಅಧ್ಯಕ್ಷ , ನನ್ನನ್ನ ತೆಗೆದು ಹಾಕೋದಿಕ್ಕೆ ಆಗೋದಿಲ್ಲ ಅಂತ ಗುಡುಗಿದ್ರು.

ಇದನ್ನೂ ವೀಕ್ಷಿಸಿ:  CM ಹುದ್ದೆ ಕನಸು ಕಾಣುತ್ತಿರುವ ಡಿಕೆಶಿಗೆ ಆಯ್ತಾ ಹಿನ್ನಡೆ..? ಪಕ್ಷದೊಳಗೆ ಹೆಚ್ಚುತ್ತಿದೆಯಾ ಮುನಿಸಿಕೊಂಡವರ ಸಂಖ್ಯೆ..?