ಸಿಎಂ ಬೊಮ್ಮಾಯಿಗೆ ಸಂಪುಟ ವಿಸ್ತರಣೆ ಸವಾಲು: ಅಮಿತ್‌ ಶಾ ಪ್ರವಾಸ ವೇಳೆ ಮತ್ತೆ ಚರ್ಚೆ?

ಸಿಎಂ ಬಸವರಾಜ ಬೊಮ್ಮಾಯಿಗೆ ಸಂಪುಟ ವಿಸ್ತರಣೆ ಸವಾಲಾಗಿ ಪರಿಣಮಿಸಿದ್ದು, ದೆಹಲಿ ಪ್ರವಾಸದ ಬಳಿಕವೂ ಕೂಡ ಕ್ಯಾಬಿನೆಟ್‌ ಗೊಂದಲ ಮುಗಿಯುತ್ತಿಲ್ಲ.
 

Share this Video
  • FB
  • Linkdin
  • Whatsapp

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವ ಸಂಪುಟ ವಿಚಾರದಲ್ಲಿ ಎಚ್ಚರಿಕೆಯ ನಡೆ ಇಟ್ಟಿದ್ದು, ಸಚಿವಾಕಾಂಕ್ಷಿಗಳಿಗೆ ಯಾವುದೇ ಭರವಸೆಯನ್ನು ಅವರು ನೀಡಿಲ್ಲ. ಹಾಗೂ ಹೈಕಮಾಂಡ್‌ ನೀಡಿದ ಸಂದೇಶದ ಬಗ್ಗೆ ಯಾವುದೇ ವಿವರಣೆಯನ್ನು ನೀಡಿಲ್ಲ. ಸಂಪುಟ ವಿಸ್ತರಣೆ ವಿಚಾರದಲ್ಲಿ ಸಿಎಂ ಮೌನಕ್ಕೆ ಶರಣಾಗಿದ್ದಾರೆ. ಸಚಿವ ಸಂಪುಟ ವಿಸ್ತರಣೆಗೆ ಆಕಾಂಕ್ಷಿಗಳಿಂದ ಸಿಎಂ ಮೇಲೆ ಒತ್ತಡ ಇದ್ದು, ಆದರೆ ಕ್ಯಾಬಿನೆಟ್‌ ವಿಸ್ತರಣೆಗೆ ದೆಹಲಿ ನಾಯಕರು ಗ್ರೀನ್‌ ಸಿಗ್ನಲ್‌ ನೀಡಿಲ್ಲ. ದೆಹಲಿ ನಾಯಕರು ಸಂಪುಟ ವಿಸ್ತರಣೆ ಮಾಡದಿದ್ರೆ ಕೆಲ ಜಿಲ್ಲೆಗಳಲ್ಲಿ ರಾಜಕೀಯ ಅಸ್ಥಿರತೆ ಹಾಗೂ ರಾಜಕೀಯ ಪರಿಣಾಮದ ಬಗ್ಗೆ ಸಿಎಂ ಹೈಕಮಾಂಡ್‌ ಗಮನಕ್ಕೆ ತಂದಿದ್ದಾರೆ. ವಾಸ್ತವ ಚಿತ್ರಣದ ಬಗ್ಗೆ ಅಮಿತ್‌ ಶಾ ಮಾಹಿತಿ ಸಂಗ್ರಹ ಮಾಡಿದ್ದು, ಕ್ಯಾಬಿನೆಟ್‌ ವಿಸ್ತರಣೆ ಸಾಧಕ ಭಾದಕಗಳ ಬಗ್ಗೆ ಜನವರಿ 12ರಂದು ದೆಹಲಿಯಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಯುವ ಸಾಧ್ಯತೆ ಇದೆ.

Tipu Sultan: ಟಿಪ್ಪು ಬಗ್ಗೆ ಸುಳ್ಳು ಹೇಳಿ 'ಕಾರ್ನಾಡ್‌' ಇತಿಹಾಸವನ್ನ ...

Related Video