ಸಿಂದಗಿ ಸಮರ ಗೆಲ್ಲಲು ಸಿಎಂ ಬೊಮ್ಮಾಯಿ ರಣತಂತ್ರ..!

*  ಬಹಿರಂಗ ಸಭೆ ಬದಲು ಹಳ್ಳಿ ಹಳ್ಳಿಗೆ ತೆರಳಿ ಸಿಎಂ ಪ್ರಚಾರ
*  ಇಂದು 13 ಗ್ರಾಮಗಳಲ್ಲಿ ಸಿಎಂ ಕ್ಯಾಂಪೇನ್‌
*  ಹಳ್ಳಿಗಳಲ್ಲಿ ತೆರೆದ ವಾಹನದಲ್ಲಿ ಬೊಮ್ಮಾಯಿ ಮತಬೇಟೆ 
 

Share this Video
  • FB
  • Linkdin
  • Whatsapp

ಸಿಂದಗಿ(ಅ.24): ಸಿಂದಗಿ ಕ್ಷೇತ್ರವನ್ನ ಗೆಲ್ಲಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಣತಂತ್ರವನ್ನ ಹೆಣೆದಿದ್ದಾರೆ. ಬಹಿರಂಗ ಸಭೆ ಬದಲು ಹಳ್ಳಿ ಹಳ್ಳಿಗೆ ತೆರಳಿ ಸಿಎಂ ಬೊಮ್ಮಾಯಿ ಪ್ರಚಾರವನ್ನ ನಡೆಸುತ್ತಿದ್ದಾರೆ. ಇಂದು 13 ಗ್ರಾಮಗಳಲ್ಲಿ ಸಿಎಂ ಪ್ರಚಾರವನ್ನ ಮಾಡಲಿದ್ದಾರೆ. ಕಂದೊಳ್ಳಿ ಗ್ರಾಮದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿಗೆ ಪುಷ್ಪಾರ್ಚನೆಯ ಸ್ವಾಗತ ಸಿಕ್ಕಿದೆ. ಹಳ್ಳಿಗಳಲ್ಲಿ ತೆರೆದ ವಾಹನದಲ್ಲಿ ಬೊಮ್ಮಾಯಿ ಮತಬೇಟೆ ಶುರುಮಾಡಿದ್ದಾರೆ. ಬೆಳಿಗ್ಗೆ 10 ರಿಂದ ಸಂಜೆ 6 ರವೆರಗೆ ಸಿಎಂ ಬಿರುಸಿನ ಪ್ರಚಾರ ಮಾಡಲಿದ್ದಾರೆ. ಸಿಎಂಗೆ ಸಚಿವ ಗೋವಿಂದ ಕಾರಜೋಳ, ಭೈರತಿ ಬಸವರಾಜ್‌, ಸಿ.ಸಿ. ಪಾಟೀಲ್‌, ಮಾಜಿ ಸಚಿವ ಲಕ್ಷ್ಮಣ ಸವದಿ ಸೇರಿದಂತೆ ಹಲವು ನಾಯಕರು ಸಾಥ್‌ ಕೊಟ್ಟಿದ್ದಾರೆ.

'ಬೈ' ಅಖಾಡಕ್ಕೆ ಬಿಎಸ್‌ವೈ, ಬದಲಾಯ್ತು ಲೆಕ್ಕಾಚಾರ, ಸಿದ್ದು ಸವಾಲ್‌ಗೆ ಸೈ ಎಂದ ಸಿಎಂ.! 

Related Video