'ಬೈ' ಅಖಾಡಕ್ಕೆ ಬಿಎಸ್‌ವೈ, ಬದಲಾಯ್ತು ಲೆಕ್ಕಾಚಾರ, ಸಿದ್ದು ಸವಾಲ್‌ಗೆ ಸೈ ಎಂದ ಸಿಎಂ.!

ಸಿಂದಗಿ, ಹಾನಗಲ್ ಉಪಚುನಾವಣಾ ಕಣ ರಂಗೇರಿದೆ. ಹಾನಗಲ್‌ನಲ್ಲಿ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್‌ವೈ ಭರ್ಜರಿ ಪ್ರಚಾರ ನಡೆಸಿದರು. ನಾನು ಬಿಎಸ್‌ವೈ, ಜೋಡೆತ್ತಲ್ಲ. ಬಿಎಸ್‌ವೈ ನಮ್ಮ ನಾಯಕರು ಎಂದು ಬೊಮ್ಮಾಯಿ ಹೇಳಿದರು. 

Share this Video
  • FB
  • Linkdin
  • Whatsapp

ಬೆಂಗಳೂರು (ಅ. 24): ಸಿಂದಗಿ, (Sindagi) ಹಾನಗಲ್ (Hanagal) ಉಪಚುನಾವಣಾ ಕಣ ರಂಗೇರಿದೆ. ಹಾನಗಲ್‌ನಲ್ಲಿ ಸಿಎಂ ಬೊಮ್ಮಾಯಿ, (Basavaraj Bommai) ಮಾಜಿ ಸಿಎಂ ಬಿಎಸ್‌ವೈ ಭರ್ಜರಿ ಪ್ರಚಾರ ನಡೆಸಿದರು. ನಾನು ಬಿಎಸ್‌ವೈ, ಜೋಡೆತ್ತಲ್ಲ. ಬಿಎಸ್‌ವೈ ನಮ್ಮ ನಾಯಕರು ಎಂದು ಬೊಮ್ಮಾಯಿ ಹೇಳಿದರು. ಹಾನಗಲ್ ಪಟ್ಟಣದ ಎಲ್ಲಾ ಕುಟುಂಬಗಳಿಗೆ 5 ಲಕ್ಷ ವಿಮೆ ನೀಡುವುದಾಗಿ ಬಿಜೆಪಿ ಪ್ರಣಾಳಿಕೆಯಲ್ಲಿ ಹೇಳಿದೆ. 

ಬೈ ಎಲೆಕ್ಷನ್‌ಗೆ ಬಿಜೆಪಿ ಪ್ರಣಾಳಿಕೆ ರಿಲೀಸ್, ಶುದ್ಧ ನೀರು, ಸೂರು ಕೊಡುವ ಭರವಸೆ

ಇನ್ನೊಂದೆಡೆ ಬಿಜೆಪಿ ವಿರುದ್ಧ ಸಿದ್ದರಾಮಯ್ಯ (Siddaramaih) ವಾಗ್ದಾಳಿ ಜೋರಾಗಿದೆ. ಸಿಎಂಗೆ ನನ್ನೆದುರು ಸುಳ್ಳು ಹೇಳಲು ಆಗಲ್ಲ, ಹಾಗಾಗಿ ವೇದಿಕೆಗೆ ಬರಲ್ಲ ಎಂದಿದ್ದಾರೆ. ಇನ್ನು ಕುಮಾರಣ್ಣ ಪ್ರಚಾರವೂ ಜೋರಾಗಿದೆ. ಕಮಿಷನ್ ಹಣ ಎಲೆಕ್ಷನ್‌ನಲ್ಲಿ ಹಂಚ್ತಿದ್ದಾರೆ ಎಂದು ಆರೋಪಿಸಿದ್ಧಾರೆ. 

Related Video