ಮೀಸಲಾತಿ ವಿಚಾರದಲ್ಲಿ ತಪ್ಪು ತೀರ್ಮಾನ ಮಾಡಬೇಡಿ: ಸಿಎಂ ಬೊಮ್ಮಾಯಿಗೆ ಹೈಕಮಾಂಡ್‌ ಕಿವಿಮಾತು

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿ ಪ್ರವಾಸ ಕೈಗೊಂಡಿದ್ದು, ಚುನಾವಣಾ ತಂತ್ರಗಾರಿಕೆ ಕುರಿತು  ಹೈಕಮಾಂಡ್‌ ನಾಯಕರ ಜೊತೆ ಚರ್ಚೆ ಮಾಡಿದ್ದಾರೆ.
 

Share this Video
  • FB
  • Linkdin
  • Whatsapp

ಸಿಎಂ ಬಸವರಾಜ ಬೊಮ್ಮಾಯಿ ಅಮಿತ್‌ ಶಾ ಹಾಗೂ ಜೆ.ಪಿ ನಡ್ಡಾ ಜೊತೆ ಚರ್ಚೆ ನಡೆಸಿದ್ದು, ಸಂಪುಟ ವಿಸ್ತರಣೆ, ಮೀಸಲಾತಿ ವಿಚಾರ ಹಾಗೂ ಚುನಾವಣಾ ತಂತ್ರಗಾರಿಕೆ ಬಗ್ಗೆ ಚರ್ಚೆ ಮಾಡಿದ್ದಾರೆ. ಪಂಚಮಸಾಲಿ ಮೀಸಲಾತಿ ವಿಚಾರ ಸಿಎಂಗೆ ಹೈಕಮಾಂಡ್‌ ನಾಯಕರು ಎಚ್ಚರಿಕೆ ಹೆಜ್ಜೆಯಿಡುವಂತೆ ಬೊಮ್ಮಾಯಿಗೆ ಸೂಚನೆ ನೀಡಿದ್ದಾರೆ. ಸಮುದಾಯದ ಒತ್ತಡಕ್ಕೆ ಮಣಿದು ತಪ್ಪು ತೀರ್ಮಾನ ಮಾಡಬೇಡಿ. ಸಾಮಾಜಿಕ ನ್ಯಾಯವೇ ಮಾನದಂಡವಾಗಿರಬೇಕು ಎಂದು ಹೈಕಮಾಂಡ್‌ ಹೇಳಿದೆ. ಒಂದು ಗಂಟೆಗೂ ಅಧಿಕ ಮೀಸಲಾತಿ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಇನ್ನು ಮೀಸಲಾತಿ ವಿಚಾರ ವೈಜ್ಞಾನಿಕವಾಗಿ ಯೋಚಿಸಿ ಕ್ರಮ ಕೈಗೊಳ್ಳಲಾಗುವುದಾಗಿ ಸಿಎಂ ತಿಳಿಸಿದ್ದು, ಪ್ರಾಂತ್ಯವಾರು ಮತ್ತು ಜಾತಿವಾರು ಸಚಿವರ ಮಾಹಿತಿ ಪಡೆದಿದ್ದಾರೆ. ನಮ್ಮದು ರಾಷ್ಟ್ರಿಯ ಪಕ್ಷ, ಚರ್ಚೆ ನಡೆಸಿಯೇ ಅಂತಿಮ ತೀರ್ಮಾನ ಎಂದು ಸಂಪುಟ ವಿಸ್ತರಣೆ ಬಗ್ಗೆಯೂ ಸಿಎಂ ಪ್ರತಿಕ್ರಿಯಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶಿಕ್ಷಕರ ನೇಮಕಾತಿ ಅಕ್ರಮ ತಡೆಗೆ ಕ್ರಮ: ಸಚಿವ ನಾಗೇಶ್‌

Related Video