ಸಿದ್ದರಾಮಯ್ಯ ಕಡೆಯಿಂದ ಹಣ ಪಡೆದ ಸಿಎಂ ಬೊಮ್ಮಾಯಿ, ವಿಡಿಯೋ ವೈರಲ್

ಬಾಗಲಕೋಟೆ ಜಿಲ್ಲೆಯ ಕೆರೂರ ಏತ ನೀರಾವರಿ ಯೋಜನೆಯ ಶಂಕು ಸ್ಥಾಪನೆಗಾಗಿ ನಡೆದ ಕಾಯ೯ಕ್ರಮ ಸಿಎಂ ಮತ್ತು ಮಾಜಿ ಸಿಎಂ ಅವರ ಸ್ನೇಹಮಯಿ ಘಟನಾವಳಿಗೆ ಸಾಕ್ಷಿಯಾಯಿತು. ಹೌದು,  ಕಾರ್ಯಕ್ರಮದಲ್ಲಿ ಪೂಜೆ ಸಲ್ಲಿಸಿ ಆರತಿ ತಟ್ಟೆಗೆ ಹಣ ಹಾಕುವ ವೇಳೆ ನಸುನಗುತ್ತಲೇ ಸಿಎಂ ಬಸವರಾಜ ಬೊಮ್ಮಾಯಿಮ ಮಾಜಿ ಸಿಎಂ ಸಿದ್ದರಾಮಯ್ಯನವರಿಂದ ಹಣ ಪಡೆದ ಪ್ರಸಂಗ ನಡೆಯಿತು. 

Share this Video
  • FB
  • Linkdin
  • Whatsapp

ಬಾಗಲಕೋಟೆ, (ಏ.23): ಜಿಲ್ಲೆಯ ಕೆರೂರ ಏತ ನೀರಾವರಿ ಯೋಜನೆಯ ಶಂಕು ಸ್ಥಾಪನೆಗಾಗಿ ನಡೆದ ಕಾಯ೯ಕ್ರಮ ಸಿಎಂ ಮತ್ತು ಮಾಜಿ ಸಿಎಂ ಅವರ ಸ್ನೇಹಮಯಿ ಘಟನಾವಳಿಗೆ ಸಾಕ್ಷಿಯಾಯಿತು. ಹೌದು, ಕಾರ್ಯಕ್ರಮದಲ್ಲಿ ಪೂಜೆ ಸಲ್ಲಿಸಿ ಆರತಿ ತಟ್ಟೆಗೆ ಹಣ ಹಾಕುವ ವೇಳೆ ನಸುನಗುತ್ತಲೇ ಸಿಎಂ ಬಸವರಾಜ ಬೊಮ್ಮಾಯಿಮ ಮಾಜಿ ಸಿಎಂ ಸಿದ್ದರಾಮಯ್ಯನವರಿಂದ ಹಣ ಪಡೆದ ಪ್ರಸಂಗ ನಡೆಯಿತು. 

Asianet Suvarna Special: ಹಾಸನ ಸಿಂಹಾಸನದ ಬುಡಕ್ಕೇ ಸಿದ್ದು ಬಾಂಬ್!

ಯಾಕಂದರೆ ಶಂಕು ಸ್ಥಾಪನೆ ಪೂಜೆ ವೇಳೆ ಆರತಿ ತಟ್ಟೆಗೆ ಹಣ ಹಾಕುವ ವಿಚಾರದಲ್ಲಿ ಆರತಿ ತಟ್ಟೆಗೆ ಹಣ ಹಾಕಲು ಸಿಎಮ್ ಜೇಬು ತಡಕಾಡಿದರು. ಇದರಿಂದ ಸ್ಥಳದಲ್ಲಿ ಹಣ ಹಾಕುವ ವೇಳೆ ಸಿಎಂ ಮತ್ತು ಮಾಜಿ ಸಿಎಂ ಮಧ್ಯೆ ಗೊಂದಲವೆನಿಸಿತು.‌ ಇದರಿಂದ ಸಿಎಂ ಬೊಮ್ಮಾಯಿ ನಸುನಗುತ್ತಲೇ ಸಿದ್ದರಾಮಯ್ಯ ಕಡೆಗೆ ಮುಖ ಮಾಡಿದರು. ಆಗ ಮಾಜಿ ಸಿಎಂ ಸಿದ್ದರಾಮಯ್ಯ ಹಣ ಕೊಡಲು ಮುಂದಾದಾಗ, ಸಿದ್ದರಾಮಯ್ಯ ಅವರಿಂದ ಬೊಮ್ಮಾಯಿ ಹಣ ಪಡೆದು ಆರತಿ ತಟ್ಟೆಗೆ ಹಾಕಿದರು.

Related Video