Asianet Suvarna News Asianet Suvarna News

ಹಾನಗಲ್‌ ಉಪಚುನಾವಣೆ: ಕಾಂಗ್ರೆಸ್‌ಗೆ ಮುಳುವಾಗಲಿದ್ಯಾ ಬೊಮ್ಮಾಯಿ ಸ್ಟ್ರಾಟರ್ಜಿ..?

Oct 22, 2021, 11:27 AM IST

ಹಾನಗಲ್‌(ಅ.22):  ಹಾನಗಲ್‌ ಉಪಚುನಾವಣೆಯಲ್ಲಿ ಶಿವರಾಜ್‌ ಸಜ್ಜನರ್‌ ಬಿಜೆಪಿಯ ಅಧಿಕೃತ ಅಭ್ಯರ್ಥಿ ಆಗಿದ್ದಾರೆ.  ಆದರೂ ಕೂಡ ಇದೀಗ ಕ್ಷೇತ್ರದಲ್ಲಿ ನಾನೇ ಅಭ್ಯರ್ಥಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರಚಾರವನ್ನ ಶುರು ಮಾಡಿದ್ದಾರೆ. ಹಾನಗಲ್‌ನಲ್ಲಿ ಮತ್ತೆ ಕಮಲ ಅರಳಿಸಲು ನಿನ್ನೆಯಿಂದ ಸಿಎಂ ಬೊಮ್ಮಾಯಿ ಕ್ಷೇತ್ರದಲ್ಲಿ ರಣತಂತ್ರಗಳನ್ನ ಹೆಣೆಯುತ್ತಿದ್ದಾರೆ. ನಿನ್ನೆ ಮಹತ್ವದ ಸಭೆಯನ್ನ ಮಾಡಿರುವ ಬೊಮ್ಮಾಯಿ, ಜಾತಿವಾರು, ಸಮುದಾಯವಾರು ಮುಖಂಡರುಗಳನ್ನ ಕರೆಸಿ ಅಲ್ಲಿನ ಬೇಡಿಕೆಗಳೇನು ಅಂತ ಆಲಿಸಿದ್ದಾರೆ. ಕಾಂಗ್ರೆಸ್‌ನ ವೋಟ್‌ ಬ್ಯಾಂಕ್‌ನಲ್ಲೂ ಕೂಡ ಬೊಮ್ಮಾಯಿ ಫೋಕಸ್‌ ಮಾಡಿದ್ದಾರೆ. 

ಸಿಂದಗಿ ಬೈಎಲೆಕ್ಷನ್‌: ಕಾಂಗ್ರೆಸ್‌ಗೆ ಮಾಸ್ಟರ್‌ ಸ್ಟ್ರೋಕ್‌ ಕೊಡಲು ಬಿಜೆಪಿ ತಂತ್ರ