ಕಾಂಟ್ರಾಕ್ಟರ್ ಕೆಂಪಣ್ಣ ಪತ್ರಕ್ಕೆ ನ್ಯಾ.ಕೆಂಪಣ್ಣ ವರದಿ ಹಿಡಿದು ಕಾಂಗ್ರೆಸ್ ಜಾಡಿಸಿದ ಸಿಎಂ ಬೊಮ್ಮಾಯಿ!

ರಾಜಕೀಯದಿಂದ ಯಡಿಯೂರಪ್ಪ ನಿವೃತ್ತಿ, ಭಾವುಕ ಭಾಷಣದಲ್ಲಿ ಮಹತ್ವದ ಘೋಷಣೆ, ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದ ಯಡಿಯೂರಪ್ಪ ಜನಪ್ರಿಯ ನಾಯಕನಾದ ಕತೆ ರೋಚಕ, ತಾಲಿಬಾನ್ ಸರ್ಕಾರ ಮಾತು ಸಮರ್ಥಿಸಿದ ಸಂಸತ ಪ್ರತಾಪ್ ಸಿಂಹ, ಖಲಿಸ್ತಾನ ಹೋರಾಟದ ನೇತೃತ್ವದ ವಹಿಸಿದ ಅಮೃತ್ ಪಾಲ್ ಸಿಂಗ್ ಯಾರು? ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

Share this Video
  • FB
  • Linkdin
  • Whatsapp

ರಾಜ್ಯ ಕಾಂಗ್ರೆಸ್ ಬಿಜೆಪಿ ಸರ್ಕಾರದ ಮೇಲೆ 40 ಪರ್ಸೆಂಟ್ ಸರ್ಕಾರ ಆರೋಪ ಮಾಡಿದೆ. ಕಾಂಟ್ರಾಕ್ಟರ್ ಕೆಂಪಣ್ಣ ಬರೆದ ಪತ್ರದ ಆಧಾರದಲ್ಲಿ ಈ ಆರೋಪವನ್ನು ಕಾಂಗ್ರೆಸ್ ಮಾಡಿದೆ. ಇದೀಗ ಕೆಂಪಣ್ಣ ಪತ್ರಕ್ಕೆ ವಿರುದ್ಧವಾಗಿ ಸಿಎಂ ಬಸವರಾಜ್ ಬೊಮ್ಮಾಯಿ ನ್ಯಾಯಮೂರ್ತಿ ಕೆಂಪಣ್ಣ ಆಯೋಗ ನೀಡಿದ ವರದಿ ಹಿಡಿದು ಕಾಂಗ್ರೆಸ್ ಜಾಡಿಸಿದ್ದಾರೆ. ಡಿನೋಟಿಫಿಕೇಶನ್ ಹೆಸರನ್ನು ತೆಗೆದು ರಿಡೋ ಎಂದು ಬದಲಾಯಿಸಿದ ಸಿದ್ದರಾಯ್ಯ ಸರ್ಕಾರ ಬರೋಬ್ಬರಿ 8,000 ಕೋಟಿ ರೂಪಾಯಿ ಹಗರಣ ಮಾಡಿದೆ. ಇದು ಸಿದ್ದರಾಮಯ್ಯ ಸರ್ಕಾರ ರಚಿಸಿದ ಕೆಂಪಣ್ಣ ವರದಿಯಲ್ಲಿ ಉಲ್ಲೇಖಿಸಿದ ದಾಖಲೆ. ನಿಮ್ಮ ಕೆಂಪಣ್ಣ ಪತ್ರದ ಆರೋಪಕ್ಕೂ ನಾವು ಮಾಡುತ್ತಿರುವ ಕೆಂಪಣ್ಣ ಆಯೋಗ ವರದಿಗೂ ಇರುವ ವ್ಯತ್ಯಾಸ ಇಷ್ಟೇ ಎಂದು ಬೊಮ್ಮಾಯಿ ಹೇಳಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video