ಚನ್ನಪಟ್ಟಣ ಉಪ ಕದನ: ನಿಖಿಲ್‌ಗೆ ಮೂರನೇ ಯುದ್ಧ, ಟ್ವಿಸ್ಟ್ ಕೊಡುತ್ತಾ ಕಣ್ಣೀರು?
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯು ಜೆಡಿಎಸ್‌ನ ನಿಖಿಲ್ ಕುಮಾರಸ್ವಾಮಿ ಅವರಿಗೆ ಮೂರನೇ ಚುನಾವಣೆಯಾಗಿದ್ದು, ಕಾಂಗ್ರೆಸ್ ಚಕ್ರವ್ಯೂಹ ರಚಿಸಿದೆ. ಈ ಚುನಾವಣೆಯು ಒಕ್ಕಲಿಗರ ರಾಜಕೀಯ ಆಯ್ಕೆಯನ್ನೂ ನಿರ್ಧರಿಸಲಿದೆ.
ಉಪಚುನಾವಣೆ ಅನ್ನೋ ಮಹಾಸಂಗ್ರಾಮಕ್ಕೆ ದಿನಗಣನೆ ಶುರುವಾಗಿದೆ.. ಅದರಲ್ಲೂ ಚನ್ನಪಟ್ಟಣ ಅನ್ನೋ ವಿಧಾನಸಭಾ ಕ್ಷೇತ್ರವಂತೂ, ಅಕ್ಷರಶಃ ಕುರುಕ್ಷೇತ್ರವಾಗಿಯೇ ಬದಲಾಗಿಬಿಟ್ಟಿದೆ.. ಅಲ್ಲಿ ಕದನರಂಗಕ್ಕೆ ಎಂಟ್ರಿ ಕೊಟ್ಟಿರೋದು,. ಜೆಡಿಎಸ್ ಪಡೆಯ ಅಭಿಮನ್ಯು.. ಅವರಿಗಿದು ಮೂರನೇ ಮಹಾಯುದ್ಧ.. ಈ ಯುದ್ಧದಲ್ಲೂ ನಿಖಿಲ್ ಅವರಿಗೆ ಸೋಲುಣಿಸೋಕೆ, ಕಾಂಗ್ರೆಸ್ ಚಕ್ರವ್ಯೂಹ ಸನ್ನದ್ಧವಾಗಿದೆ.. ಆದ್ರೆ, ಈ ಕದನದಲ್ಲಿ ಈಗ ಮೆಗಾ ಟ್ವಿಸ್ಟ್ ಎದುರಾಗಿದೆ..
ಚನ್ನಪಟ್ಟಣ ಕದನಕಣ, ಬರೀ ವಿಧಾನಸಭಾ ಕ್ಷೇತ್ರವಾಗಿ ಮಾತ್ರ ಉಳಿದಿಲ್ಲ ವೀಕ್ಷಕರೇ.. ಈ ಚುನಾವಣೆಗೆ ಈ ಪರಿ ಸ್ಕೋಫ್ ಯಾಕೆ ಬಂದಿದೆ ಅನ್ನೋದು ನಿಮಗೆ ಅರ್ಥವಾಗ್ಬೇಕಿದ್ರೆ, ಇದರ ರಿಸಲ್ಟ್ ಎಂಥಾ ಪವಾಡ ಮಾಡಲಿದೆ ಅನ್ನೋದು ನೀವು ತಿಳ್ಕೊಬೇಕು. ಈ ಹೋರಾಟ, ಅಷ್ಟು ಸುಲಭಕ್ಕೆ ಮುಗಿಯುವಂಥದ್ದಂತೂ ಖಂಡಿತಾ ಅಲ್ಲ.. ಬರೀ ಒಬ್ಬ ಶಾಸಕನ ಆಯ್ಕೆಗೆ ಮಾತ್ರವೇ ಅಲ್ಲದೆ, ಒಕ್ಕಲಿಗರ ಪೊಲಿಟಿಕಲ್ ಫೇವರೆಟ್ ಯಾರು ಅನ್ನೋದರ ಆಯ್ಕೆಯೂ ಇದೇ ಚುನಾವಣೇಲಿ ನಡೆಯುತ್ತೆ ಅಂತಿದ್ದಾರೆ. ಚನ್ನಪಟ್ಟಣದ ಕದನಕಣದಲ್ಲಿ ಇಬ್ಬರು ಅಭ್ಯರ್ಥಿಗಳು ಮಾತ್ರ ಹೋರಾಡ್ತಾ ಇಲ್ಲ.. ಎರಡು ವಿರುದ್ಧ ಧೃವಗಳೇ ಸಂಘರ್ಷಕ್ಜೆ ನಿಂತುಬಿಟ್ಟಿವೆ.. ಈ ಸಮರ ರಹಸ್ಯ ಏನು ಅನ್ನೋದರ ಅಸಲಿ ಕತೆ, ಇಲ್ಲಿದೆ ನೋಡಿ..