ದೋಸ್ತಿಗೆ 'ಯೋಗಿ' ಟೆನ್ಷನ್.. ಸೈನಿಕನ ಜೊತೆ ಸಂಧಾನ..!

ಚನ್ನಪಟ್ಟಣಕ್ಕೆ ಮೈತ್ರಿ ಅಭ್ಯರ್ಥಿ ಎಚ್‌ಡಿಕೆ ಪುತ್ರನಾ.. ಪತ್ನಿನಾ? ಪಟ್ಟಣ ಯುದ್ಧದ ದಿಕ್ಕನ್ನೇ ಬದಲಿಸ್ತಾರಾ ಸಿಡಿದೆದ್ದ ಸೈನಿಕ? ಈ ಬಗ್ಗೆ ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.

Share this Video
  • FB
  • Linkdin
  • Whatsapp

ಬೆಂಗಳೂರು(ಅ.19):ಬೊಂಬೆನಾಡಿನಲ್ಲಿ ದಿನಕ್ಕೊಂದು ಚದುರಂಗ, ಕ್ಷಣಕ್ಕೊಂದು ದಾಳ ಬೀಳುತ್ತಿದೆ. ಬೈ ಎಲೆಕ್ಷನ್ ಅಖಾಡಕ್ಕೆ ರೋಚಕ ತಿರುವು ಈಗಾಗಲೇ ಸಿಗುತ್ತಿದೆ. ಚನ್ನಪಟ್ಟಣದಲ್ಲಿ ದೋಸ್ತಿ ಅಭ್ಯರ್ಥಿಯಾಗಿ ಸ್ಪರ್ಧಿಸೋದು ದಳಪತಿ ಪುತ್ರನಾ.. ಪತ್ನಿನಾ..? ಅನ್ನೋ ಕುತೂಹಲ ಎಲ್ಲರಲಲ್ಲಿದೆ.

ಬಿಡದಿಯ ಆ ತೋಟದ ಮನೆಯಲ್ಲಿ ಬೆೊಂಬೆಯಾಟ ಗೆಲ್ಲುವ ರಣವ್ಯೂಹ ರೆಡಿಯಾಗಿದೆ. ದಳಪತಿ ಕುಮಾರಸ್ವಾಮಿ ಹೆಣೆದ 'ಬೊಂಬೆ'ಜಾಲಕ್ಕೆ ಸೈನಿಕನದ್ದೇ ಮೊದಲ ಹಾಗೂ ಏಕೈಕ ಟೆನ್ಶನ್‌. ಮೈತ್ರಿ ಪಾಳೆಯದ ಅಷ್ಟೂ ಲೆಕ್ಕಾಚಾರಗಳನ್ನು ಯೋಗೇಶ್ವರ್‌ ಉಲ್ಟಾ ಪಲ್ಟಾ ಮಾಡ್ತಾರಾ ಅನ್ನೋ ಕುತೂಹಲವಿದೆ.

ಚನ್ನಪಟ್ಟಣ ಉಪಚುನಾವಣೆ: ಜೆಡಿಎಸ್‌ನಿಂದ ಸಿ.ಪಿ.ಯೋಗೇಶ್ವರ್ ಮನವೊಲಿಕೆಗೆ ಕಸರತ್ತು

ಹಠ ಹಿಡಿದ ಸೈನಿಕನ ಜೊತೆ ದಳಪತಿ ದೂತರ ಸಂಧಾನ ನಡೆದಿದೆ ಸಂಧಾನಕ್ಕೆ ಬಂದ ಜೆಡಿಎಸ್ ನಾಯಕರಿಗೆ ಯೋಗೇಶ್ವರ್ ಏನು ಹೇಳಿದ್ದಾರೆ ಅನ್ನೋದರ ವಿವರ ಇಲ್ಲಿದೆ. ಒಟ್ಟಾರೆಯಾಗಿ, ಕ್ಲೈಮ್ಯಾಕ್ಸ್ ಹಂತದಲ್ಲಿ ಚನ್ನಪಟ್ಟಣ ಬೈ ಎಲೆಕ್ಷನ್ ಟಿಕೆಟ್ ಫೈಟ್ ಬಂದಿದೆ.

Related Video