Asianet Suvarna News Asianet Suvarna News

ಆಪರೇಷನ್‌ ಮಾಡಿದ್ರೆ, ಡಿಕೆಶಿ ಜೊತೆಯೇ ಮಾಡಬೇಕಲ್ವಾ: ಚಲವಾದಿ ನಾರಾಯಣ ಸ್ವಾಮಿ

ಕಾಂಗ್ರೆಸ್‌ ಸರ್ಕಾರವನ್ನು ಬೀಳಿಸಲು ವಿದೇಶದಲ್ಲಿ ಪ್ರಯತ್ನಗಳು ನಡೆಯುತ್ತಿವೆ ಎಂಬ ಡಿಕೆಶಿ ಹೇಳಿಕೆಗೆ ಚಲವಾದಿ ನಾರಾಯಣಸ್ವಾಮಿತಿರುಗೇಟು ನೀಡಿದ್ದಾರೆ.

ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಹುಮತದ ಕಾಂಗ್ರೆಸ್‌(Congress) ಸರ್ಕಾರವನ್ನು ಬೀಳಿಸಲು ವಿದೇಶದಲ್ಲಿ ಕುಳಿತು ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಸ್ಪೋಟಕ ಹೇಳಿಕೆ ನೀಡಿದ್ದರು. ಇದೀಗ ಡಿಕೆಶಿ ಹೇಳಿಕೆಗೆ ಬಿಜೆಪಿ ಎಂಎಲ್‌ಸಿ ಚಲವಾದಿ ನಾರಾಯಣಸ್ವಾಮಿ(Chalavadi Narayanaswamy) ತಿರುಗೇಟು ನೀಡಿದ್ದಾರೆ. ಒಂದು ವೇಳೆ ಆಪರೇಷನ್‌ ಮಾಡಿದ್ರೆ, ಡಿಕೆಶಿ ಜೊತೆಯೇ ಮಾಡಬೇಕಲ್ವಾ ಎಂದು ಪ್ರಶ್ನಿಸಿದ್ದಾರೆ. ಡಿಕೆಶಿಯೇ ಹೀಗೆ ಹೇಳಿದ್ರೆ ಹೇಗೆ ಎಂದು ಅವರು ಕುಟುಕಿದ್ದಾರೆ. ಅವರೇ ಪಕ್ಷದ ಅಧ್ಯಕ್ಷರು ಆಗಿದ್ದಾರೆ. ಅವರಿಲ್ಲದೇ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. 

ಇದನ್ನೂ ವೀಕ್ಷಿಸಿ:  ಮೊದಲು ಅವರ ತಟ್ಟೆಯಲ್ಲಿ ಬಿದ್ದಿರುವುದನ್ನು ನೋಡಲು ಹೇಳಿ: ವಿ.ಎಸ್‌. ಉಗ್ರಪ್ಪ

Video Top Stories