ಅಳೆದೂ, ತೂಗಿ ದಾಳ ಹಾಕುವ ಸಾಹುಕಾರ್ ಜಾರಕಿಹೊಳಿ ಎಡವಿದ್ದೆಲ್ಲಿ..?
ಯಡಿಯೂರಪ್ಪ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ನಡೆದ ಉಪಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿ ಗೋಕಾಕ್ ಕ್ಷೇತ್ರದಿಂದ ಪುನರಾಯ್ಕೆಯಾಗಿದ್ದರು. ನಂತರ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿತ್ತು. ಜಲಸಂಪನ್ಮೂಲ ಖಾತೆ, ಬೆಳಗಾವಿ ಉಸ್ತುವಾರಿಯನ್ನು ನೀಡಲಾಯಿತು.
ಬೆಂಗಳೂರು (ಮಾ. 04): ಸಿಡಿ ಪ್ರಕರಣದಲ್ಲಿ ಸಾಹುಕಾರ್ ರಮೇಶ್ ಜಾರಕಿಹೊಳಿ ರಾಜಿನಾಮೆ ಕೊಟ್ಟಿದ್ದಾರೆ. ಸಿಡಿ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನವನ್ನುಂಟು ಮಾಡಿದೆ. ಮುಂಬರುವ ವಿವಿಧ ರಾಜ್ಯಗಳ ಚುನಾವಣೆ ಹಾಗೂ ಉಪಚುನಾವಣೆ ಹಿನ್ನಲೆಯಲ್ಲಿ ಮುಜುಗರದಿಂದ ತಪ್ಪಿಸಿಕೊಳ್ಳಲು ಹೈಕಮಾಂಡ್ ಸೂಚನೆ ಮೇರೆಗೆ ರಾಜಿನಾಮೆ ನೀಡಿದ್ದಾರೆ.
ಸಾಹುಕಾರ್ ಜಾರಕಿಹೊಳಿ ಆಯ್ತು, ಮಾಜಿ ಸಿಎಂ ಸೀಡಿ ಕೂಡಾ ಇದ್ಯಂತೆ!
ಯಡಿಯೂರಪ್ಪ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ನಡೆದ ಉಪಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿ ಗೋಕಾಕ್ ಕ್ಷೇತ್ರದಿಂದ ಪುನರಾಯ್ಕೆಯಾಗಿದ್ದರು. ನಂತರ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿತ್ತು. ಜಲಸಂಪನ್ಮೂಲ ಖಾತೆ, ಬೆಳಗಾವಿ ಉಸ್ತುವಾರಿಯನ್ನು ನೀಡಲಾಯಿತು. ತಮ್ಮ ಖಾತೆಯಲ್ಲಿ ಉತ್ತಮ ಕೆಲಸಗಳನ್ನೂ ಮಾಡಿದ್ದರು. ಇವರು ಮುಂದಿನ ಸಿಎಂ ಅಭ್ಯರ್ಥಿಯಾಗುವ ಅರ್ಹತೆ ಹೊಂದಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಅಳೆದು, ತೂಗಿ ದಾಳ ಹಾಕುವ ಸಾಹುಕಾರ್ ಎಡವಿದ್ದೆಲ್ಲಿ..?