Asianet Suvarna News Asianet Suvarna News

ಬಿಎಸ್‌ವೈ ಎದುರು ಹಾಕಿಕೊಂಡಿದ್ದಕ್ಕೆ ಬೆಲ್ಲದ್, ಯೋಗೇಶ್ವರ್, ಯತ್ನಾಳ್ ಕೈ ತಪ್ಪಿತಾ ಸ್ಥಾನ..?

Aug 5, 2021, 10:40 AM IST

ಬೆಂಗಳೂರು (ಆ. 05): ಬೊಮ್ಮಾಯಿ 29 ಮಂತ್ರಿಗಳನ್ನೊಳಗೊಂಡ ಸಚಿವ ಸಂಪುಟ ರಚಿಸಿದ್ದಾರೆ. 7 ಮಂದಿಗೆ ಕೊಕ್ ನೀಡಲಾಗಿದೆ. 6 ಹೊಸಬರಿಗೆ ಅವಕಾಶ ನೀಡಲಾಗಿದೆ. ಸಿಎಂ ಪಟ್ಟ ಏರಲು ಹೊರಟಿದ್ದ ಬೆಲ್ಲದ್‌ಗೆ ಸಚಿವ ಸ್ಥಾನವೂ ಸಿಗದಂತಾಯಿತು.

ಬೊಮ್ಮಾಯಿ ಸಂಪುಟಕ್ಕೆ 6 ಇನ್, 7 ಔಟ್, 29 ಜಾಕ್‌ಪಾಟ್..!

ಅದೇ ರೀತಿ ಬಿಎಸ್‌ವೈ ನಾಯಕತ್ವಕ್ಕೆ ಸಡ್ಡು ಹೊಡೆದು ಸಿಎಂ ಸ್ಥಾನದಿಂದ ಕೆಳಗಿಳಿಸಲು ಯಶಸ್ವಿಯಾದ ಸಿಪಿ ಯೋಗೇಶ್ವರ್‌ಗೂ ಕೂಡಾ ಸಚಿವ ಸ್ಥಾನ ನೀಡಬಾರದು ಎಂಬ ಬಿಎಸ್‌ವೈ ಪಟ್ಟಿಗೆ ವರಿಷ್ಠರು ಮಣಿದಿದ್ದಾರೆ ಎನ್ನಲಾಗಿದೆ. ಅದೇ ರೀತಿ ಪದೇ ಪದೇ ಬಿಎಸ್‌ವೈ ವಿರುದ್ಧ ಹೇಳಿಕೆ ನೀಡುತ್ತಿದ್ದ ಯತ್ನಾಳ್‌ಗೂ ಕೂಡಾ ಕೊಕ್ ಸ್ಥಾನ ಸಿಕ್ಕಿಲ್ಲ. ಇವೆಲ್ಲದರ ಬಗ್ಗೆ ಇನ್‌ಸೈಡ್ ಪಾಲಿಟಿಕ್ಸ್ ಇಲ್ಲಿದೆ. 

Video Top Stories