ಬೊಮ್ಮಾಯಿ ಸಂಪುಟಕ್ಕೆ 6 ಇನ್, 7 ಔಟ್, 29 ಜಾಕ್‌ಪಾಟ್..!

ಬೊಮ್ಮಾಯಿ ಸಂಪುಟಕ್ಕೆ 29 ಸಚಿವರು ಸೇರ್ಪಡೆಯಾಗಿದ್ದಾರೆ. ಬಿಎಸ್‌ವೈ ಸಂಪುಟದ 7 ಮಂದಿಗೆ ಕೊಕ್ ಕೊಡಲಾಗಿದೆ. 6 ಹೊಸಬರಿಗೆ ಅವಕಾಶ ನೀಡಲಾಗಿದೆ. ವರಿಷ್ಠರು, ರಾಜ್ಯ ಘಟಕ, ಸಂಘ, ಬಿಎಸ್‌ವೈ ಆಶಯಗಳನ್ನು ಸಮತೋಲನ ಮಾಡಲಾಗಿದೆ. 
 

First Published Aug 5, 2021, 9:02 AM IST | Last Updated Aug 5, 2021, 9:02 AM IST

ಬೆಂಗಳೂರು (ಆ. 05): ಬೊಮ್ಮಾಯಿ ಸಂಪುಟಕ್ಕೆ 29 ಸಚಿವರು ಸೇರ್ಪಡೆಯಾಗಿದ್ದಾರೆ. ಬಿಎಸ್‌ವೈ ಸಂಪುಟದ 7 ಮಂದಿಗೆ ಕೊಕ್ ಕೊಡಲಾಗಿದೆ. 6 ಹೊಸಬರಿಗೆ ಅವಕಾಶ ನೀಡಲಾಗಿದೆ. ವರಿಷ್ಠರು, ರಾಜ್ಯ ಘಟಕ, ಸಂಘ, ಬಿಎಸ್‌ವೈ ಆಶಯಗಳನ್ನು ಸಮತೋಲನ ಮಾಡಲಾಗಿದೆ. 

ಸಂಪುಟಕ್ಕೆ ಸೇರಿರುವ ಸಚಿವರ ಪೈಕಿ ಎಂಟು ಮಂದಿ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಒಕ್ಕಲಿಗರು ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದವರಿಗೆ ತಲಾ ಏಳು ಸಚಿವ ಸ್ಥಾನ, ಮೂವರು ದಲಿತರು, ಇಬ್ಬರು ಬ್ರಾಹ್ಮಣರು, ಪರಿಶಿಷ್ಟಪಂಗಡ ಹಾಗೂ ರೆಡ್ಡಿ ಜನಾಂಗಕ್ಕೆ ತಲಾ ಒಂದು ಸಚಿವ ಸ್ಥಾನ ನೀಡಲಾಗಿದೆ.