ಸಿಎಂ ದೆಹಲಿ ಭೇಟಿ, ಜೋರಾಗಿದೆ ಮಂತ್ರಿಗಿರಿ ಲಾಬಿ ; ಯಾರಿಗೆ ಪಟ್ಟ? ಯಾರಿಗೆ ಕೊಕ್?

ಸಿಎಂ ಯಡಿಯೂರಪ್ಪ ದೆಹಲಿ ಪ್ರವಾಸದಲ್ಲಿದ್ದು, ಇತ್ತ ರಾಜ್ಯದಲ್ಲಿ ಮಂತ್ರಿಗಿರಿಗಾಗಿ ಲಾಬಿ ಶುರುವಾಗಿದೆ. ಕೆಲ ಸಚಿವಾಕಾಂಕ್ಷಿಗಳು ಗುರುವಾರ ಪ್ರತ್ಯೇಕವಾಗಿ ದೆಹಲಿಗೆ ದೌಡಾಯಿಸಿದ್ದಾರೆ. ಹೈ ಕಮಾಂಡ್‌ ಅಂಗಳದಲ್ಲಿ ಲಾಬಿ ಜೋರಾಗಿಯೇ ನಡೆಯುತ್ತಿದೆ. 

First Published Sep 18, 2020, 11:12 AM IST | Last Updated Sep 18, 2020, 11:32 AM IST

ಬೆಂಗಳೂರು (ಸೆ. 18): ಸಿಎಂ ಯಡಿಯೂರಪ್ಪ ದೆಹಲಿ ಪ್ರವಾಸದಲ್ಲಿದ್ದು, ಇತ್ತ ರಾಜ್ಯದಲ್ಲಿ ಮಂತ್ರಿಗಿರಿಗಾಗಿ ಲಾಬಿ ಶುರುವಾಗಿದೆ. ಕೆಲ ಸಚಿವಾಕಾಂಕ್ಷಿಗಳು ಗುರುವಾರ ಪ್ರತ್ಯೇಕವಾಗಿ ದೆಹಲಿಗೆ ದೌಡಾಯಿಸಿದ್ದಾರೆ. ಹೈ ಕಮಾಂಡ್‌ ಅಂಗಳದಲ್ಲಿ ಲಾಬಿ ಜೋರಾಗಿಯೇ ನಡೆಯುತ್ತಿದೆ. 

ದಿಲ್ಲಿಯಲ್ಲಿ ಈಗ ಸಂಪುಟ ಸರ್ಕಸ್; ಹಲವರು ಪರೋಕ್ಷವಾಗಿ ಲಾಬಿ..!

ಶಾಸಕರಾದ ಎಚ್‌ ವಿಶ್ವನಾಥ್, ಸಿಪಿ ಯೋಗೇಶ್ವರ್, ಎಂಪಿ ರೇಣುಕಾಚಾರ್ಯ ಪರೋಕ್ಷವಾಗಿ ಲಾಬಿ ನಡೆಸಿದ್ದಾರೆ ಎನ್ನಲಾಗುತ್ತಿದೆ. ಯಾರಿಗೆ ಮಂತ್ರಿಗಿರಿ ಸಿಗುತ್ತದೆ, ಯಾರಿಗೆ ಕೋಕ್ ಸಿಗುತ್ತದೆ ಎಂಬುದು ಹೈಕಮಾಂಡ್ ನಿರ್ಧಾರದ ಮೇಲೆ ನಿಂತಿದೆ. ಸಂಪುಟ ವಿಸ್ತರಣೆ ಮಾಡಬೇಕೋ, ಅಥವಾ ಪುನರ್‌ ರಚನೆ ಮಾಡಬೇಕೋ ಎಂಬ ವಿಚಾರದಲ್ಲಿ ಹೈಕಮಾಂಡ್ ನಿರ್ಧಾರವೇ ಅಂತಿಮವಾಗಿರುತ್ತದೆ ಎಂದು ಸಿಎಮ ಯಡಿಯೂರಪ್ಪ ಹೇಳಿದ್ದಾರೆ. ಈ ಬಗ್ಗೆ ಇನ್ನಷ್ಟು ಪೊಲಿಟಿಕಲ್ ಅಪ್‌ಡೇಟ್ಸ್‌ ಇಲ್ಲಿದೆ ನೋಡಿ..!