ಸಂಪುಟ ಸರ್ಕಸ್ ರೇಸ್‌ನಲ್ಲಿದ್ದಾರೆ ಈ ಪ್ರಬಲ ಆಕಾಂಕ್ಷಿಗಳು; ಯಾರು ಇನ್? ಯಾರು ಔಟ್?
ಮತ್ತೆ ಸಂಪುಟ ಕಸರತ್ತು ಶುರುವಾಗಿದೆ. ಸಿಎಂ ಯಡಿಯೂರಪ್ಪ ಮೂರು ದಿನಗಳಲ್ಲಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಅಮಿತ್ ಶಾ, ಜೆಪಿ ನಡ್ಡಾ ಜೊತೆ ಮತ್ತೊಮ್ಮೆ ಚರ್ಚೆ ನಡೆಸಲಿದ್ದಾರೆ. ಸಿಎಂಗೆ ಸಂಪುಟ ವಿಸ್ತರಣೆ ಮೇಲೆ ಒಲವಿದ್ದರೆ, ಹೈಕಮಾಂಡ್‌ಗೆ ಪುನರ್ ರಚನೆಯತ್ತ ಒಲವಿದೆ.
ಬೆಂಗಳೂರು (ಸೆ. 29): ಮತ್ತೆ ಸಂಪುಟ ಕಸರತ್ತು ಶುರುವಾಗಿದೆ. ಸಿಎಂ ಯಡಿಯೂರಪ್ಪ ಮೂರು ದಿನಗಳಲ್ಲಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಅಮಿತ್ ಶಾ, ಜೆಪಿ ನಡ್ಡಾ ಜೊತೆ ಮತ್ತೊಮ್ಮೆ ಚರ್ಚೆ ನಡೆಸಲಿದ್ದಾರೆ. ಸಿಎಂಗೆ ಸಂಪುಟ ವಿಸ್ತರಣೆ ಮೇಲೆ ಒಲವಿದ್ದರೆ, ಹೈಕಮಾಂಡ್‌ಗೆ ಪುನರ್ ರಚನೆಯತ್ತ ಒಲವಿದೆ.
ಅನಿರೀಕ್ಷಿತ ಜವಾಬ್ದಾರಿ ಕೊಟ್ಟ ಬಿಜೆಪಿ: ರಾಜೀನಾಮೆಗೆ ಸಿದ್ಧವೆಂದ ಸಿ.ಟಿ. ರವಿ
ಒಂದು ವೇಳೆ ಸಂಪುಟ ವಿಸ್ತರಣೆಯಾದ್ರೆ ಐದು ಸ್ಥಾನ ಭರ್ತಿಯಾಗುತ್ತದೆ. ಸಿಟಿ ರವಿಯಿಂದ ತೆರವಾಗುವ ಸ್ಥಾನಕ್ಕೆ ಆರ್ ಶಂಕರ್, ಎಂಟಿಬಿ, ಉಮೇಶ್ ಕತ್ತಿ, ಸುನೀಲ್ ಕುಮಾರ್, ಅಂಗಾರ, ಅರವಿಂದ ಲಿಂಬಾವಳಿ ಪ್ರಮುಖ ಆಕಾಂಕ್ಷಿಗಳಾಗಿದ್ಧಾರೆ. ಸಂಪುಟ ಪುನಾರಚನೆಯಾದ್ರೆ ಸಿಸಿ ಪಾಟೀಲ್, ಶಶಿಕಲಾ ಜೊಲ್ಲೆ, ಪ್ರಭು ಚೌಹಾಣ್, ಕೋಟಾ ಶ್ರೀನಿವಾಸ್ ಪೂಜಾರಿ ಸೇರಿದಂತೆ ಇಬ್ಬರಿಗೆ ಕೊಕ್ ನೀಡುವ ಸಾಧ್ಯತೆ ಇದೆ. ಈ ಬಗ್ಗೆ ಹೆಚ್ಚಿನ ಡಿಟೇಲ್ಸ್ ಇಲ್ಲಿದೆ ನೋಡಿ..!