ಸಚಿವ ಆನಂದ್‌ ಸಿಂಗ್‌ಗೆ ಪತ್ರ ಬರೆದು ಅಭಿನಂದನೆ ತಿಳಿಸಿದ ಬಿಎಸ್‌ವೈ

ಹಂಪಿ ಗತವೈಭವ ಸಾರುವ ವೇದಿಕೆ ನಿರ್ಮಾಣ ಮಾಡಲಾಗಿತ್ತು. ಇನ್ನು ಮುಖ್ಯವಾಗಿ  ವೇದಿಕೆಯನ್ನು ಹವಾನಿಯಂತ್ರಿತ ಜರ್ಮನ್‌ ಟೆಂಟ್‌(German Tent) ನಿರ್ಮಿಸಲಾಗಿತ್ತು. ಒಟ್ಟಿನಲ್ಲಿ ಹೊಸಪೇಟೆಯನ್ನು ಫುಲ್ ಕೇಸರಿಮಗೊಳಿಸಿ ಅಚ್ಚುಕಟ್ಟಾಗಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ  ಸಚಿವ ಆನಂದ್ ಸಿಂಗ್ ಅವರಿಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಅಭಿನಂದನೆ ತಿಳಿಸಿದ್ದಾರೆ. 

First Published Apr 19, 2022, 6:50 PM IST | Last Updated Apr 19, 2022, 6:50 PM IST

ಬೆಂಗಳೂರು, (ಏ.19): ನೂತನ ಜಿಲ್ಲೆ ವಿಜಯನಗರದಲ್ಲಿ ನಡೆದ ಎರಡು ದಿನಗಳ ಕರ್ನಾಟಕ ಬಿಜೆಪಿ ಕಾರ್ಯಕಾರಣಿ ಸಭೆ ಯಶಸ್ವಿಯಾಗಿದೆ. ಮುಂದಿನ ಚುನಾವಣೆ ಸೇರಿದಂತೆ ಪಕ್ಷ ಸಂಘಟನೆ ಬಗ್ಗೆ ಮಹತ್ವದ ನಿರ್ಣಯಕೈಗೊಳ್ಳಲಾಗಿದೆ.

Vijayanagara: ಬಿಜೆಪಿ ಕಾರ್ಯಕಾರಿಣಿಗೆ ಹಂಪಿ ಗತ ವೈಭವದ ವೇದಿಕೆ: ಕೇಸರಿಮಯವಾದ ಹೊಸಪೇಟೆ

ಇನ್ನು  ಕೇಸರಿ ಬಣ್ಣದಲ್ಲಿ ಜಿಲ್ಲಾ ಕೇಂದ್ರವನ್ನು ನಳನಳಿಸುವಂತೆ ಸಿಂಗರಿಸಲಾಗಿತ್ತು. ಜತೆಗೆ ಹಂಪಿ ಗತವೈಭವ ಸಾರುವ ವೇದಿಕೆ ನಿರ್ಮಾಣ ಮಾಡಲಾಗಿತ್ತು. ಇನ್ನು ಮುಖ್ಯವಾಗಿ  ವೇದಿಕೆಯನ್ನು ಹವಾನಿಯಂತ್ರಿತ ಜರ್ಮನ್‌ ಟೆಂಟ್‌(German Tent) ನಿರ್ಮಿಸಲಾಗಿತ್ತು. ಒಟ್ಟಿನಲ್ಲಿ ಹೊಸಪೇಟೆಯನ್ನು ಫುಲ್ ಕೇಸರಿಮಗೊಳಿಸಿ ಅಚ್ಚುಕಟ್ಟಾಗಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ  ಸಚಿವ ಆನಂದ್ ಸಿಂಗ್ ಅವರಿಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಅಭಿನಂದನೆ ತಿಳಿಸಿದ್ದಾರೆ.