ಅಪ್ಪ ಬೇಡ ಅಂದರೂ ಮಗನ ಬಾಯಲ್ಲಿ ವರುಣಾ ಜಪ! ಶಿಕಾರಿವೀರನ ನಿರ್ಧಾರದ ಹಿಂದಿದೆ ವರುಣಾ "ಖೆಡ್ಡಾ" ರಹಸ್ಯ!

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬೇಡವೆಂದರೂ ಅವರ ಪುತ್ರ ವಿಜಯೇಂದ್ರ ವರುಣಾ ಕ್ಷೇತ್ರದಿಂದಲೇ ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ ಮಾಡಲು ತಯಾರಿ ನಡೆಸುತ್ತಿದ್ದಾರೆ. 

First Published Apr 2, 2023, 2:21 PM IST | Last Updated Apr 2, 2023, 2:21 PM IST

ಬೆಂಗಳೂರು (ಏ.02): ವರುಣಾ ವಾರ್‌ಗೆ ರೆಡಿಯಾದ್ರಾ ಸನ್ ಆಫ್ ಶಿಕಾರಿವೀರ..? ವರುಣಾದಿಂದ ಮಗನ ಸ್ಪರ್ಧೆ ಇಲ್ಲಅಂತಿದ್ದಾರೆ ಅಪ್ಪ..! ಅಪ್ಪ ಬೇಡ ಅಂದ್ರೂ ಮಗನ ಬಾಯಲ್ಲಿ ವರುಣಾ ಜಪ.! ಸಿದ್ದು ಸೋಲಿಗೆ ಸಿದ್ಧವಾಯ್ತಾ ವಿಜಯೇಂದ್ರ ವ್ಯೂಹ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ವರುಣಾ 'ವಿಜಯ' ರಹಸ್ಯ.

ಇಷ್ಟು ದಿನ ಇದ್ದ ಕುತೂಹಲ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲಿಂದ ಸ್ಪರ್ಧಿಸ್ತಾರೆ ಅನ್ನೋದು. ಈಗಿರೋ ಕುತೂಹಲ ವರುಣಾದಿಂದ ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಸ್ಪರ್ಧಿಸ್ತಾರಾ ಅನ್ನೋದು. ಅಪ್ಪ ಬೇಡ ಅಂತಿದ್ದಾರೆ,  ಮಗನಿಗೆ ಮಾತ್ರ ವರುಣಾ ವ್ಯಾಮೋಹ ಕಮ್ಮಿಯಾಗ್ತಿಲ್ಲ. ವರುಣಾ ಯುದ್ಧಭೂಮಿಗೆ ನುಗ್ಗಿರೋ ವಿಜಯೇಂದ್ರ, ಸಿದ್ದರಾಮಯ್ಯನವರಿಗೆ ರಣವೀಳ್ಯ ಕೊಟ್ಟೇ ಬಿಟ್ಟೇ ಬಿಟ್ಟಿದ್ದಾರೆ. ಹಾಗಾದ್ರೆ ಏನಿದು ವಿಜಯೇಂದ್ರ ರಾಜನೀತಿ..? ವರುಣಾ “ವಿಜಯ” ರಹಸ್ಯದ ಅಸಲಿ ಗುಟ್ಟನ್ನು ತೋರಿಸ್ತೀವಿ ನೋಡಿ.

2018ರಲ್ಲಿ ವರುಣಾದಲ್ಲಿ ವಿಜಯೇಂದ್ರ ಸ್ಪರ್ಧೆಗೆ ಬ್ರೇಕ್ ಹಾಕಿದ್ದು ಬಿಜೆಪಿ ಹೈಕಮಾಂಡ್. ಈ ಬಾರಿ ಬ್ರೇಕ್ ಹಾಕಿರೋದು ಸ್ವತಃ ಯಡಿಯೂರಪ್ಪ. ಹಾಗಾದ್ರೆ ವರುಣಾದಿಂದ ಮಗ ಸ್ಪರ್ಧಿಸೋದು ಬೇಡ ಅನ್ನೋ ನಿರ್ಧಾರಕ್ಕೆ ಬಿಎಸ್ವೈ ಬಂದದ್ದೇಕೆ..? ಸಿದ್ದರಾಮಯ್ಯ ವಿರುದ್ಧ ವರುಣಾ ಯುದ್ಧಕ್ಕೆ ರೆಡಿಯಾಗಿದ್ದ ವಿಜಯೇಂದ್ರಗೆ ತಂದೆ ಯಡಿಯೂರಪ್ಪನವರೇ ಬ್ರೇಕ್ ಹಾಕಿದ್ದಾರೆ. ಮಗನ ರಣೋತ್ಸಾಹಕ್ಕೆ ತಂದೆ ತಣ್ಣೀರೆರಚಿದ್ದು ಯಾಕೆ..? ಮಗನಿಗೆ ಇಷ್ಟ ಇದ್ರೂ ವರುಣಾದಿಂದ ಸ್ಪರ್ಧೆ ಬೇಡ ಅಂತ ಬಿಎಸ್ವೈ ಹೇಳಿದ್ದೇಕೆ..? ಯಡಿಯೂರಪ್ಪನವರ ನಿರ್ಧಾರದ ಹಿಂದಿರೋ ರಹಸ್ಯ ಇಲ್ಲಿದೆ ನೋಡಿ.

Video Top Stories