ಬಚ್ಚಾ ರಾಹುಲ್ ಗಾಂಧಿ ಪ್ರಧಾನಿ ಟೀಕೆ ಮಾಡ್ತಾನೆ, ಕಾಂಗ್ರೆಸ್ ವಿರುದ್ಧ ಗುಡುಗಿದ ಬಿಎಸ್‌ವೈ !

ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ರಾಜ್ಯದಲ್ಲಿ ಸಂಚರಿಸುತ್ತಿರುವ ಬೆನ್ನಲ್ಲೇ ಬಿಜೆಪಿಯಿಂದ ಜನಸಂಕಲ್ಪ ಯಾತ್ರೆ ಆರಂಭಗೊಂಡಿದೆ. ಈ ಯಾತ್ರೆಯಲ್ಲಿ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.  ಹಾವೇರಿಯಲ್ಲಿ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಸಂಕಲ್ಪ ಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ . ಪೋಸ್ಟರ್ ರಾಜಕೀಯ ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

First Published Oct 11, 2022, 10:35 PM IST | Last Updated Oct 11, 2022, 10:35 PM IST

ಬಿಎಸ್ ಯಡಿಯೂರಪ್ಪ ಯಾರ ಬಗ್ಗೆ ಟೀಕೆ ಮಾಡುತ್ತಿದ್ದರೂ ಬಳಸುವ ಪದಗಳು ಎಲ್ಲೆ ಮೀರುವುದಿಲ್ಲ. ಇಂದು ಬಿಎಸ್‌ವೈ ಮಾತು ಕಾಂಗ್ರೆಸ್ ಕಂಗಾಲು ಮಾಡಿದೆ. ಜನಸಂಕಲ್ಪ ಯಾತ್ರೆಯಲ್ಲಿ ಯಡಿಯೂರಪ್ಪ ಮಾತನಾಡಿದ್ದಾರೆ. ಬಚ್ಚಾ ರಾಹುಲ್ ಗಾಂಧಿ ಮೋದಿ ಬಗ್ಗೆ ಟೀಕೆ ಮಾಡ್ತಾನೆ. ಸಿದ್ದರಾಮಯ್ಯ ಮೋದಿ ಕುರಿತು ಟೀಕೆ ಮಾಡುತ್ತಿದ್ದಾರೆ. ಇವರಿಗೆ ಟೀಕೆ ಮಾಡುವ ನೈತಿಕತೆಯೇ ಇಲ್ಲ. ಮೋದಿಗೆ ಇಡೀ ವಿಶ್ವವೇ ಮನ್ನಣೆ ನೀಡುತ್ತಿದೆ ಎಂದು ಬಿಎಸ್‌ವೈ ಹೇಳಿದ್ದಾರೆ. ಇತ್ತ ಸಿದ್ದರಾಮಯ್ಯನವರ ವಿರುದ್ಧ ಸಿಎಂ ಬಸವರಾಜ್ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ. ಆ ಹುಡುಗ ಓಡು ಅಂದ್ರೆ ಒಡುತ್ತೀರಿ, ಕೂತ್ಕೋ ಅಂದ್ರೆ ಕೂತ್ಕೊತ್ತಿದ್ದೀರಿ ಸಿದ್ದರಾಮಯ್ಯನವರೆ ಎಂದು ವ್ಯಂಗ್ಯವಾಡಿದ್ದಾರೆ. ಭಾರತ್ ಜೋಡೋ ಯಾತ್ರೆ ನಡುವೆ ಬಿಡೆಪಿ ಪೋಸ್ಟರ್ ತಿರುಗೇಟು ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.