ಬಿಜೆಪಿಯಲ್ಲಿ ಯಡಿಯೂರಪ್ಪ ಏನೂ ಮಾಡುವ ಸ್ಥಿತಿಯಲ್ಲಿಲ್ಲ, ಬಣಕಾರ ಬಂಡಾಯಕ್ಕೆ ಬಿಜೆಪಿ ಥಂಡಾ!
ಬಿಜೆಪಿಯಲ್ಲಿ ಯಡಿಯೂರಪ್ಪ ಅವರ ಕೈ ಮೇಲಿಲ್ಲ. ಕೇವಲ ಪಕ್ಷದಲ್ಲಿದ್ದಾರೆ ಹೊರತು ಏನೂ ಮಾಡುವ ಸ್ಥಿತಿಯಲ್ಲಿಲ್ಲ ಎಂದು ಯುಬಿ ಬಣಕಾರ್ ಹೇಳಿದ್ದಾರೆ. ಇದೀಗ ಯುಬಿ ಬಣಕಾರ್ ಬಂಡಾಯ ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ.
ಬಿಜೆಪಿ ಬಿಡಲು ಸಚಿವ ಬಿಸಿ ಪಾಟೀಲ್ ಕಾರಣ ಎಂದು ಬಿಜೆಪಿ ಶಾಸಕ ಯುಬಿ ಬಣಕಾರ ನೇರವಾಗಿ ಆರೋಪ ಮಾಡಿ ಇದೀಗ ಕಾಂಗ್ರೆಸ್ ಸೇರಿದ್ದಾರೆ. ಹೀರೇಕೆರೆ ತಾಲೂಕಿನ ಕ್ಷೇತ್ರದ ಪ್ರಬಲ ನಾಯಕ ಯುಬಿ ಬಣಕಾರ್‌ಗೆ ಬಿಸಿ ಪಾಟೀಲ್ ಮಗ್ಗುಲ ಮುಳ್ಳಾಗಿ ಪರಿಣಮಿಸಿದ್ದಾರೆ ಅನ್ನೋ ಆರೋಪ ಬೆಂಬಲಿಗರಿಂದ ಕೇಳಿಬರುತ್ತಿದೆ. ಬಿಎಸ್ ಯಡಿಯೂರಪ್ಪ ಬಿಜೆಪಿಯಲ್ಲಿದ್ದಾರೆ ಹೊರತು ಅವರು ಏನೂ ಮಾಡುವ ಸ್ಥಿತಿಯಲ್ಲಿಲ್ಲ. ಯಡಿಯೂರಪ್ಪ ನಮಗೆ ಸಹಾಯ ಮಾಡುತ್ತಾರೆ ಅನ್ನೋ ನಂಬಿಕೆ ಇಲ್ಲ ಎಂದು ಯುಬಿ ಬಣಕಾರ್ ಹೇಳಿದ್ದಾರೆ. ಬಿಜೆಪಿ ನಾಯಕರು ತಮಗೆ ಗೌರವ ಕೊಡುತ್ತಿಲ್ಲ. ಹೀಗಾಗಿ ಪಕ್ಷದಿಂ ಹೊರಹೋಗುವ ನಿರ್ಧಾರ ಮಾಡಿದ್ದೇನೆ ಎಂದು ಯುಬಿ ಬಣಕಾರ್ ಹೇಳಿದ್ದಾರೆ.